ಕರ್ನಾಟಕ

karnataka

ETV Bharat / state

ಪ್ರತಿಪಕ್ಷಗಳೊಂದಿಗೆ ಸಭಾಪತಿ ಮಾತುಕತೆ ವಿಫಲ: ಕಲಾಪ ನಾಳೆಗೆ ಮುಂದೂಡಿಕೆ - Speaker talks with opposition parties news

ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವಾಗಿ ವಿಧಾನಪರಿಷತ್​ನಲ್ಲಿ ಚರ್ಚೆ ನಡೆಸಲು ಸಭಾಪತಿಗಳು ಮುಂದಾದರು. ಇದನ್ನು ಪ್ರತಿಪಕ್ಷ ಕಾಂಗ್ರೆಸ್ ವಿರೋಧಿಸಿತು. ಬಳಿಕ ಸಭಾಪತಿ ಪ್ರತಿಪಕ್ಷಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Speaker talks with opposition parties is not succeful:
ವಿಧಾನಪರಿಷತ್​ನಲ್ಲಿ ಚರ್ಚೆ

By

Published : Mar 4, 2021, 5:22 PM IST

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಕ್ಷಗಳ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಗಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವಾಗಿ ವಿಧಾನಪರಿಷತ್​ನಲ್ಲಿ ಚರ್ಚೆ ನಡೆಸಲು ಸಭಾಪತಿಗಳು ಮುಂದಾದರು. ಇದನ್ನು ಪ್ರತಿಪಕ್ಷ ಕಾಂಗ್ರೆಸ್ ವಿರೋಧಿಸಿತು. ಮಹತ್ವದ ವಿಚಾರದ ಚರ್ಚೆಗೆ ಒಮ್ಮತ ಮೂಡಿಸುವ ಸಲುವಾಗಿ ಸಭಾಪತಿಗಳು, ಮೂರು ಪಕ್ಷಗಳ ಸಚೇತಕರು, ಆಡಳಿತ ಪಕ್ಷದ ನಾಯಕರು ಹಾಗೂ ಪ್ರತಿಪಕ್ಷದ ನಾಯಕರ ಜೊತೆ ಸಭೆ ಕೂಡ ನಡೆಸಿದರು.

ಓದಿ:ಸದನದೊಳಗೆ ಸಂಗಮೇಶ್​​​​ಗೆ ನೋ ಎಂಟ್ರಿ.. ಹೈಡ್ರಾಮಾ ನಡುವೆ ಮಾರ್ಷಲ್​​​​​​​ಗಳಿಗೆ ಸಿದ್ದು ಕ್ಲಾಸ್

ಆದರೆ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಮನವೊಲಿಸಲು ಆಗಲಿಲ್ಲ. ಚರ್ಚೆ ಆರಂಭಿಸಿದ ಸಂದರ್ಭದಲ್ಲಿ ಧರಣಿ ಮುಂದುವರೆಯಿತು. ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಧಿಕ್ಕಾರ ಕೂಗಿದರು. ಸದನವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು. ಪರಿಷತ್ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮತ್ತೆ ಸಮಾವೇಶಗೊಳ್ಳಲಿದೆ.

ABOUT THE AUTHOR

...view details