ಬೆಂಗಳೂರು:ರಾಜೀನಾಮೆ ನೀಡಿದ ಮೈತ್ರಿ ಕೂಟದ 14 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸ್ಪೀಕರ್ ವಿರುದ್ದ ಕೆಂಡಾಮಂಡಲರಾಗಿದ್ದಾರೆ.
ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತೆ ಎರಡನೇ ಬಾರಿ ಕ್ರಮಬದ್ಧ ರಾಜೀನಾಮೆ ಕೊಟ್ಟಿದ್ರು. ಆದರೆ ಸ್ಪೀಕರ್ ರಾಜಕೀಯ ದುರುದ್ದೇಶದಿಂದ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಕ್ರಮ ದೋಷಪೂರಿತವಾಗಿದ್ದು,ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರ್ತಾರೆ ಎಂದರು. ಶಾಸಕರೇ ಸ್ವಇಚ್ಛೆಯಿಂದ ರಾಜಿನಾಮೆ ನೀಡಿದ್ದು, ಸುಪ್ರೀಂನಲ್ಲಿ ಎಲ್ಲಾ ಶಾಸಕರಿಗೆ ನ್ಯಾಯ ಸಿಗುತ್ತೆ. ರಮೇಶ್ ಕುಮಾರ್ ನಾನು ಸಂವಿಧಾನದ ರಕ್ಷಕ ಅಂತಾರೆ. ಇತಿಹಾಸದಲ್ಲಿ ಉಳಿಯುವ ತೀರ್ಪು ನೀಡ್ತೀನಿ ಎಂದಿದ್ದರು. ಆದರೀಗ 14 ಜನ ಶಾಸಕರನ್ನ ಅನರ್ಹಗೊಳಿಸಿದ್ದು ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕಾರಜೋಳ ಕಿಡಿ ಕಾರಿದ್ದಾರೆ.