ಬೆಂಗಳೂರು :ವಿಶ್ವಾಸಮತ ಇಂದು ಯಾವುದೇ ಕಾರಣಕ್ಕೂ ಮಿಸ್ ಆಗೋದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಏನು ಶಾಸಕರಾಗಿ ಮೆರೆಯೋಕೆ ಬರ್ತೀರಾ?: ರೆಬಲ್ಸ್ ವಿರುದ್ಧ ಸ್ಪೀಕರ್ ಗರಂ
ಅತೃಪ್ತ ಶಾಸಕರ ವಿರುದ್ಧ ಗುಡುಗಿದ ಸ್ಪೀಕರ್ ರಮೇಶ್ ಕುಮಾರ್, ನಿಮ್ಮ ಕರ್ಮಕ್ಕೆ, ದೇಶದ ಕರ್ಮಕ್ಕೆ ಏನ್ ಮಾಡೋಕಾಗುತ್ತೆ? ಕೋರ್ಟ್ ನಲ್ಲಿ ಏನ್ ಹೇಳ್ತಾರೋ ಹೇಳ್ಕೊಳ್ಳಲಿ. ವಿಶ್ವಾಸಮತ ಇಂದು ಯಾವುದೇ ಕಾರಣಕ್ಕೂ ಮಿಸ್ ಆಗೋಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರಿಗೆ, ಅತೃಪ್ತರಿಗೆ ತಿಳಿವಳಿಕೆ ಇಲ್ಲ, ರಾಜೀನಾಮೆ ಯಾವ ರೀತಿ ಕೊಡಬೇಕು ಅಂತ ಗೊತ್ತಿಲ್ಲ. ಸ್ಪೀಕರ್ ಏನ್ ನಿಮ್ಮ ದಾಯಾದಿಗಳಲ್ಲ. ಕನಿಷ್ಠ ತಿಳಿವಳಿಕೆ ಇಲ್ಲದವರು ಶಾಸಕರಾಗಿ ಮೆರೆಯೋಕೆ ಬರ್ತೀರಾ? ಸ್ಪೀಕರ್ ಯಾಕೆ ನೋಟಿಸ್ ಕೊಡ್ತಾರೆ ಅಂತ ಗೊತ್ತಿಲ್ಲ ಎಂದು ರೆಬಲ್ ಶಾಸಕರ ವಿರುದ್ದ ಕಿಡಿಕಾರಿದರು.
ಕಲಾಪಕ್ಕೆ ಅವರು ಹಾಜರಾಗದಿದ್ರೆ ಅವರ ಇಷ್ಟ, ನಾನೇನು ಮಾಡಕ್ಕಾಗಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ನಿಮ್ಮ ಕರ್ಮಕ್ಕೆ, ದೇಶದ ಕರ್ಮಕ್ಕೆ ಏನ್ ಮಾಡೋಕಾಗುತ್ತೆ? ಕೋರ್ಟ್ನಲ್ಲಿ ಏನ್ ಹೇಳ್ತಾರೋ ಹೇಳ್ಕೊಳ್ಳಲಿ ಎಂದು ಅತೃಪ್ತರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಗುಡುಗಿದ್ದಾರೆ.