ಕರ್ನಾಟಕ

karnataka

ETV Bharat / state

ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ: ಕಠಿಣ ಕ್ರ‌ಮಕ್ಕೆ ಸ್ಪೀಕರ್ ಕಾಗೇರಿ ಆಗ್ರಹ

ಈ ರೀತಿ ಹೊಣೆಗೇಡಿತನ, ಬೇಜವಾಬ್ದಾರಿ ವರ್ತನೆ ತೋರಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ. ಕಠಿಣ ಕ್ರಮಕ್ಕೆ ನಿಯಾಮವಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆಯೂ ಮನವಿ ಮಾಡುತ್ತೇನೆ. ರಾಜ್ಯಸಭೆ, ಲೋಕಸಭೆಯಲ್ಲಿ ಸರಿಯಾದ ಕಲಾಪವೇ ನಡೆದಿಲ್ಲ. ಗದ್ದಲದಲ್ಲೇ ಮುಗಿದಿದೆ. ಲೋಕಸಭೆ ಸ್ಪೀಕರ್, ರಾಜ್ಯಸಭೆ ಅಧ್ಯಕ್ಷರಿಗೆ ಗೌರವ ಕೊಡದಿರುವ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಕಠಿಣ ಕ್ರ‌ಮಕ್ಕೆ ಸ್ಪೀಕರ್ ಕಾಗೇರಿ ಆಗ್ರಹ
ಕಠಿಣ ಕ್ರ‌ಮಕ್ಕೆ ಸ್ಪೀಕರ್ ಕಾಗೇರಿ ಆಗ್ರಹ

By

Published : Aug 13, 2021, 5:11 PM IST

ಬೆಂಗಳೂರು: ಲೋಕಸಭೆ ಸ್ಪೀಕರ್, ರಾಜ್ಯಸಭೆ ಅಧ್ಯಕ್ಷರಿಗೆ ಗೌರವ ಕೊಡದಿರುವ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿ ಹೊಣೆಗೇಡಿತನ, ಬೇಜವಾಬ್ದಾರಿ ವರ್ತನೆ ತೋರಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ. ಕಠಿಣ ಕ್ರಮಕ್ಕೆ ನಿಯಾಮವಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆಯೂ ಮನವಿ ಮಾಡುತ್ತೇನೆ. ಪ್ರಜಾಪ್ರಭುತ್ವದ ದೇಗುಲಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಪಕ್ಷಗಳು ಕೂಡ ತನ್ನ ಸದಸ್ಯರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯಸಭೆ, ಲೋಕಸಭೆಯಲ್ಲಿ ಸರಿಯಾದ ಕಲಾಪವೇ ನಡೆದಿಲ್ಲ. ಗದ್ದಲದಲ್ಲೇ ಮುಗಿದಿದೆ. ಒಟ್ಟು 86 ತಾಸು ಲೋಕಸಭೆಯಲ್ಲಿ ಕಲಾಪ ನಡೆದಿದ್ದರೆ, ಅದರಲ್ಲಿ 22 ತಾಸು ಗಲಾಟೆಯಲ್ಲೇ ಮುಗಿದಿದೆ. ರಾಜ್ಯಸಭೆಯಲ್ಲಿ 106 ತಾಸು ನಡೆದರೆ, 28 ಗಂಟೆ ಗಲಾಟೆಯಲ್ಲೇ ಕಳೆದಿದೆ. ಗದ್ದಲದ ಗೂಡಾಗಿ, ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸದಿರುವುದು ಪ್ರತಿಪಕ್ಷಗಳಿಗೆ ಒಂದು ಕಪ್ಪುಚುಕ್ಕೆ ಎಂದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ನಡೆದುಕೊಂಡಿರುವ ರೀತಿ ಸಂಸದೀಯ ವ್ಯವಸ್ಥೆಗೆ ಅಗೌರವವಾಗಿದೆ. ಲೋಕಸಭೆಗೆ, ವಿಧಾನಸಭೆಗೆ ಮಾದರಿಯಾಗಿದ್ದ ರಾಜ್ಯಸಭೆಯಲ್ಲಿ ಇವತ್ತು ನಮಗೆಲ್ಲಾ ತಲೆ ತಗ್ಗಿಸುವ ಕೆಲಸ ಆಗಿದೆ ಎಂದು ಹೇಳಿದರು.

ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಅಂಬೇಡ್ಕರ್ ಸೇರಿದಂತೆ ಹಲವರು ಸಂವಿಧಾನದ ಆಶಯ ತಿಳಿಸಿದ್ದಾರೆ. ಈ ಘಟನೆಗಳನ್ನು ಕುಸ್ತಿ ಅಖಾಡಗಳನ್ನು ನೋಡಿದಾಗ ಮುಂದಿನ ಪೀಳಿಗೆಗೆ ಯಾವ ಸಂದೇಶ ರವಾನಿಸುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಅರಾಜಕತೆ ಕಡೆಗೆ ತೆರಳೋದರಲ್ಲಿ ಯಾವುದೇ ಸಂದೇಹ ಇರಲ್ಲ. ಈ ಘಟನೆಗಳನ್ನು ನಾನು ಖಂಡಿಸುತ್ತೇನೆ ಎಂದರು.

ಈ ಆಗಸ್ಟ್ 15 ರಂದು ವಿಶೇಷವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಮ್ಮ ವಿಧಾನಸಭೆ ಸಚಿವಾಲಯದಿಂದ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮೊದಲ ಬಾರಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ಆಗಸ್ಟ್ 15 ವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಓದಿ:ಖಾತೆ ಬದಲಾವಣೆಗಾಗಿ ದೆಹಲಿಗೆ ಹೋಗುವುದಿಲ್ಲ: ಸಚಿವ ಆನಂದ ಸಿಂಗ್ ಸ್ಪಷ್ಟನೆ

For All Latest Updates

TAGGED:

ABOUT THE AUTHOR

...view details