ಬೆಂಗಳೂರು: ಲೋಕಸಭೆ ಸ್ಪೀಕರ್ ಕಾರ್ಯಕ್ರಮ ಹೊಸ ಪರಂಪರೆ ಅಲ್ಲ. ಕಾಂಗ್ರೆಸ್ಗೆ ಮಾಹಿತಿ ಕೊರತೆ ಇದೆ ಎಂದು ಸ್ಪೀಕರ್ ಕಾಗೇರಿ ತಿರುಗೇಟು ನೀಡಿದ್ದಾರೆ. ಜಂಟಿ ಸದನ ಸದಸ್ಯರನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಭಾಷಣ ಮಾಡಿರುವುದು ಸಂವಿಧಾನ ವಿರೋಧಿ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಅವರು, ರಾಜ್ಯದ ಹಲವು ವಿಧಾನಸಭೆಗಳಲ್ಲಿ ಲೋಕಸಭೆ ಸ್ಪೀಕರ್ ಮಾತನಾಡಿದ್ದಾರೆ. ಇದು ಹೊಸ ಪರಂಪರೆಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸದಸ್ಯರಿಗೆ ಬಹುಶಃ ಮಾಹಿತಿಯ ಕೊರತೆ ಇದೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸ್ಪೀಕರ್ ಹಾಗೂ ಸಭಾಪತಿ ಅಧಿಕಾರ ವ್ಯಾಪ್ತಿಯಾಗಿದೆ. ಇಲ್ಲಿ ಬೇರೆಯವರ ಹಸ್ತಕ್ಷೇಪದ ಅಗತ್ಯವಿಲ್ಲ. ಸಂವಿಧಾನದ ಉಲ್ಲಂಘನೆ ಆಗಿದೆ ಅನ್ನುವವರು ಇನ್ನಷ್ಟು ಸಂವಿಧಾನದ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.