ಕರ್ನಾಟಕ

karnataka

ETV Bharat / state

ಸಂಗಮೇಶ್ ಯಾಕೆ ಶರ್ಟ್ ಬಿಚ್ಚಿದ್ರು ಅನ್ನೋದನ್ನು ಸ್ಪೀಕರ್ ಅರ್ಥ ಮಾಡ್ಕೋಬೇಕಿತ್ತು: ರಾಮಲಿಂಗಾ ರೆಡ್ಡಿ - Sangamesh untied the shirt at vidhanasabhe

ಸಂಗಮೇಶ್ ಅವರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಿದ್ದಾರೆ. ಅವರು ಯಾವ ಕಾರಣಕ್ಕೆ ಶರ್ಟ್ ಬಿಚ್ಚಿದ್ರುವ ಅನ್ನೋದನ್ನು ಸ್ಪೀಕರ್ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Ramalinga Reddy
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

By

Published : Mar 4, 2021, 4:45 PM IST

ಬೆಂಗಳೂರು: ಶಾಸಕರಿಗೆ ಕಿರುಕುಳ ನೀಡಲಾಗಿತ್ತು. ಅವರು ಮತ್ತು ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗಿತ್ತು. ಆದ್ದರಿಂದ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:ಏನೇ ಮಾಡಿದ್ರೂ ದಿನವೂ ಸದನಕ್ಕೆ ಬರುತ್ತೇನೆ: ಶಾಸಕ ಸಂಗಮೇಶ್

ಈ ಹಿಂದೆ ಗೂಳಿಹಟ್ಟಿ ಶೇಖರ್ ಶರ್ಟ್ ಹರಿದುಕೊಂಡಿದ್ದರು. ಅವರೇಕೆ ಶರ್ಟ್ ಹರಿದುಕೊಂಡ್ರು?. ಇದನ್ನು ಸ್ಪೀಕರ್ ಅರ್ಥ ಮಾಡಿಕೊಳ್ಳಬೇಕು. ಇಂತಹ‌ ದ್ವೇಷ ರಾಜಕಾರಣ ಮಾಡಬಾರದು. ಶರ್ಟ್ ಬಿಚ್ಚಿದ್ದು ಸರಿಯಲ್ಲ. ಆದರೆ ಅವರು ಯಾಕೆ ಶರ್ಟ್ ಬಿಚ್ಚಿದ್ರು. ಅವರಿಗೆ ಮಾತನಾಡೋಕೆ ಅವಕಾಶವನ್ನೇ ಕೊಡಲಿಲ್ಲ. ಶಾಸಕರಿಗೆ ಅವಕಾಶ ಕೊಡದಿದ್ದರೆ ಏನ್ಮಾಡ್ತಾರೆ?. ಸ್ಪೀಕರ್ ಈ ರೀತಿ ನಡೆದುಕೊಳ್ಳಬಾರದು. ಶಾಸಕರಿಗೆ ಭದ್ರತೆ ಇಲ್ಲವೆಂದರೆ ಹೇಗೆ?. ಪ್ರಜಾಪ್ರಭುತ್ವದಲ್ಲಿ ಇಂಥದ್ದು ಸರಿಯಲ್ಲ. ಅವರನ್ನು ಕಚೇರಿಗೆ ಕರೆಸಿ ಸ್ಪೀಕರ್ ಕಾಗೇರಿಯವರು ಕೇಳಬೇಕಿತ್ತು. ಅದನ್ನೂ ಮಾಡದೆ ಈ ತೀರ್ಮಾನ ತೆಗೆದುಕೊಂಡಿದ್ದು, ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

For All Latest Updates

ABOUT THE AUTHOR

...view details