ಆನೇಕಲ್: ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ಆನೇಕಲ್ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗಳ ಪೂರ್ವ ತಯಾರಿಗಾಗಿ ರೌಡಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿ ಶೀಟರ್ಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಡಿ ಚೆನ್ನಣ್ಣನವರ್ ಬಿಸಿ ಮುಟ್ಟಿಸಿದರು.
ಗ್ರಾಮ ಪಂಚಾಯ್ತಿ ಚುನಾವಣೆ: ರೌಡಿ ಶೀಟರ್ಗಳಿಗೆ ಬಿಸಿ ಮುಟ್ಟಿಸಿದ ಎಸ್ಪಿ ಚೆನ್ನಣ್ಣನವರ್ - Anekal
ಆನೇಕಲ್-ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬೆಸ್ತಮಾನಹಳ್ಳಿ ಸುನಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ಗಳು ಮತ್ತವರ ಹಿಂಬಾಲಕರ ಪಡೆಗಳನ್ನು ಪ್ರತ್ಯೇಕವಾಗಿ ಕರೆಸಿ ಎಸ್ಪಿ ಚೆನ್ನಣ್ಣನವರ್ ಎಚ್ಚರಿಕೆ ನೀಡಿದರು.
ರೌಡಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ
ಆನೇಕಲ್-ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬೆಸ್ತಮಾನಹಳ್ಳಿ ಸುನಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ಗಳು ಮತ್ತವರ ಹಿಂಬಾಲಕರ ಪಡೆಗಳನ್ನು ಪ್ರತ್ಯೇಕವಾಗಿ ಕರೆಸಿ ಎಸ್ಪಿ ಎಚ್ಚರಿಕೆ ನೀಡಿದರು.
ಪ್ರತಿ ಬಾರಿ ಎಚ್ಚರಿಕೆ ನೀಡಿದರೂ ದಪ್ಪ ಚರ್ಮವಿದ್ದಂತೆ ಆನೇಕಲ್ ಭಾಗದಲ್ಲಿ ರೌಡಿಗಳು ಮೆರೆದಾಟ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಐದಾರು ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಆಸಾಮಿಗಳಿಗೆ ಗೂಂಡಾ ಕಾಯ್ದೆಗೆ ಫಿಕ್ಸ್ ಮಾಡುವುದಾಗಿ ತಿಳಿಸಿದ್ದಾರೆ. ಹದಿನೈದು ದಿನಗಳಲ್ಲಿಯೇ ಈ ಕೆಲಸ ಮುಗಿಸುತ್ತೇವೆ ಎಂದು ಚೆನ್ನಣ್ಣನವರ್ ಮಾಹಿತಿ ನೀಡಿದರು.