ಕರ್ನಾಟಕ

karnataka

ETV Bharat / state

ನೈರುತ್ಯ ರೈಲ್ವೆ ವಿಭಾಗದಿಂದ ಇ-ಬುಕ್ಕಿಂಗ್ ಕೌಂಟರ್​ ಬಂದ್​​ - ಕರ್ನಾಟಕ ಕೋವಿಡ್ ಸುದ್ದಿ

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಮೇ 10 ರಿಂದ ಲಾಕ್ ಡೌನ್​ ಘೋಷಣೆ ಮಾಡಿದ್ದು, ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ. ಈ ನಡುವೆ ಲಾಕ್​ಡೌನ್ ಜಾರಿಯಾಗುವ ಮೊದಲೇ ರೈಲ್ವೆ ಸೇವೆ ಸ್ಥಗಿತಗೊಂಡಿದೆ.

Southwest Railway E-Booking Counter Closed
ನೈರುತ್ಯ ರೈಲ್ವೆ ಇ-ಬುಕ್ಕಿಂಗ್ ಕೌಂಟರ್​ ಬಂದ್

By

Published : May 8, 2021, 9:22 AM IST

ಬೆಂಗಳೂರು : ಕೋವಿಡ್ ಪ್ರಕರಣಗಳು ಉಲ್ಭಣಗೊಂಡ ಹಿನ್ನೆಲೆ ನೈರುತ್ಯ ರೈಲ್ವೆ ವಿಭಾಗದಿಂದ ಇ-ಬುಕ್ಕಿಂಗ್ ಕೌಂಟರ್​ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.‌

ಪ್ರಯಾಣಿಕರ ಕೊರತೆ ಹಿನ್ನೆಲೆ ಈಗಾಗಲೇ ರೈಲ್ವೆ ಸೇವೆಯನ್ನೂ ಸ್ಥಗಿತಗೊಳಿಸಲಾಗಿದ್ದು, ರಾಜ್ಯದ ಪ್ರಮುಖ ನಿಲ್ದಾಣಗಳಾದ ಮಂಡ್ಯದ ಬಿ.ಜಿ ನಗರ ಮತ್ತು ತುಮಕೂರಿನ ಎಡಿಯೂರಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.

ಓದಿ : ಬೆಡ್ ಸಿಗದೆ ಚಿಕಿತ್ಸೆಗಾಗಿ ಸೋಂಕಿತರು ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದಾರೆ: ಡಿಸಿ

ರಾಜ್ಯದಲ್ಲಿ ಮೇ 10 ರಿಂದ 24 ರ ವರೆಗೆ ರಾಜ್ಯದಲ್ಲಿ ಲಾಕ್ ಡೌನ್​ ಜಾರಿಗೊಳಿಸಿ ಸಿಎಂ ಬಿಎಸ್​ವೈ ಈಗಾಗಲೇ ಘೋಷಣೆ ಮಾಡಿದ್ದು, ಲಾಕ್​ ಡೌನ್​ ಅವಧಿಯಲ್ಲಿ ಬಸ್​, ಆಟೋ, ಕ್ಯಾಬ್​ಗಳ ಸಂಚಾರವೂ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕಾರ್ಮಿಕರು ನಗರದ ಬಿಟ್ಟು ಹೋಗದಂತೆ ಸಿಎಂ ಮನವಿ ಮಾಡಿದ್ದಾರೆ.

ABOUT THE AUTHOR

...view details