ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಮುಷ್ಕರ, ಯುಗಾದಿ ಹಬ್ಬ: ಮೆಮು ರೈಲುಗಳ ಕಾರ್ಯಾಚರಣೆ ವಿಸ್ತರಿಸಿದ ನೈರುತ್ಯ ರೈಲ್ವೆ - ಮೆಮು ರೈಲು,

ಸಾರಿಗೆ ನೌಕರರ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆ ಮೆಮು ರೈಲುಗಳ ಕಾರ್ಯಾಚರಣೆಯನ್ನು ನೈರುತ್ಯ ರೈಲ್ವೆ ವಿಸ್ತರಿಸಿದೆ.

Southwest Railway Expanded, Southwest Railway Expanded runs of Memu Trains, Memu Trains, Memu Trains news,  ಮೆಮು ರೈಲುಗಳ ಕಾರ್ಯಾಚರಣೆ, ಮೆಮು ರೈಲುಗಳ ಕಾರ್ಯಾಚರಣೆ ವಿಸ್ತರಿಸಿದ ನೈರುತ್ಯ ರೈಲ್ವೆ, ಮೆಮು ರೈಲುಗಳ ಕಾರ್ಯಾಚರಣೆ ವಿಸ್ತರಿಸಿದ ನೈರುತ್ಯ ರೈಲ್ವೆ ಸುದ್ದಿ, ಮೆಮು ರೈಲು, ಮೆಮು ರೈಲು ಸುದ್ದಿ,
ಮೆಮು ರೈಲುಗಳ ಕಾರ್ಯಾಚರಣೆ ವಿಸ್ತರಿಸಿದ ನೈರುತ್ಯ ರೈಲ್ವೆ

By

Published : Apr 10, 2021, 10:43 AM IST

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ 4 ನೇ ದಿನಕ್ಕೆ ಕಾಲಿಟ್ಟಿದೆ. ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಮೆಮು ರೈಲುಗಳ ಕಾರ್ಯಾಚರಣೆ ನೈರುತ್ಯ ರೈಲ್ವೆ ವಿಸ್ತರಿಸಿದೆ.

ನೌಕರರ ಮುಷ್ಕರ ಮತ್ತು ಯುಗಾದಿ ಹಬ್ಬದ ನಿಮಿತ್ತ ಸಾರ್ವಜನಿಕ ಅನುಕೂಲಕ್ಕಾಗಿ ಬೆಂಗಳೂರು - ಮೈಸೂರು ಮೆಮು (MEMU) ರೈಲು ವಾರದ ಎಲ್ಲ ದಿನಗಳು (ರವಿವಾರ ಸಹ) ಸಂಚರಿಸಲಿದೆ.

ಈ ಮೊದಲು ಭಾನುವಾರ ಸಂಚಾರವಿರಲಿಲ್ಲ. ಇದೀಗ ಭಾನುವಾರವೂ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈಲುಗಾಡಿ ಸಂಖ್ಯೆ 06255, 06256, 06257, 06258 ಆಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ‌ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details