ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮುಂದುವರೆದ ನೈರುತ್ಯ ಮುಂಗಾರು: ನಾಳೆ ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - etv bharat kannada

ನಾಳೆ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ಯಾದಗಿರಿ, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

southwest-monsoon-rain-alert-again-yellow-alert-for-6-districts-of-the-state
ರಾಜ್ಯದಲ್ಲಿ ಮುಂದುವರೆದ ನೈರುತ್ಯ ಮುಂಗಾರು: ನಾಳೆ ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

By ETV Bharat Karnataka Team

Published : Sep 25, 2023, 7:42 PM IST

ಬೆಂಗಳೂರು:ನೈರುತ್ಯ ಮುಂಗಾರು ಚುರುಕಾಗಿದ್ದು, ಸೆ.26 ರಂದು ಬಾಗಲಕೋಟ, ಗದಗ, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸೆ.29 ಮತ್ತು 30 ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮತ್ತು ಅದೇ ದಿನಗಳಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದಿದೆ.

ಉಳಿದಂತೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಸೆ.30 ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ತಿಳಿಸಿದೆ. ಮುಂದಿನ 48 ಗಂಟೆಗಳ ಕಾಲ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಉತ್ತರ ಒಳನಾಡಿನ ಬಾಗಲಕೋಟ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ. ಇರುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಕರಾವಳಿಯ ಬಹುತೇಕ ಕಡೆಗಳಲ್ಲಿ, ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಯಾದಗಿರಿ ಜಿಲ್ಲೆಯ ಶಹಪುರದಲ್ಲಿ 7 ಸೆಂ.ಮೀ. ಮಳೆಯಾಗಿದೆ.

ಮಳೆ ಪ್ರಮಾಣ:ಅಂಕೋಲಾ (ಉತ್ತರ ಕನ್ನಡ ಜಿಲ್ಲೆ), ಹೆಬ್ಬೂರು (ತುಮಕೂರು ಜಿಲ್ಲೆ) ತಲಾ 5 ಸೆಂ. ಮೀ, ಕುಮಟಾ, ಗೇರ್ಸೊಪ್ಪ, ಗೋಕರ್ಣ, ಮಂಕಿ (ಎಲ್ಲಾ ಉತ್ತರ ಕನ್ನಡ ಜಿಲ್ಲೆ) ತಲಾ 4, ಕುಂದಾಪುರ, ಕೋಟ, ಸಿದ್ದಾಪುರ (ಉಡುಪಿ ಜಿಲ್ಲೆ), ಬೇಲಿಕೇರಿ (ಉತ್ತರ ಕನ್ನಡ ಜಿಲ್ಲೆ), ಹೊನ್ನಾವರ, ಖಜೂರಿ (ಕಲಬುರಗಿ ಜಿಲ್ಲೆ), ಮೈಸೂರು, ರಾಯಲ್ಪಾಡು (ಕೋಲಾರ ಜಿಲ್ಲೆ) ತಲಾ 3, ಉಡುಪಿ, ಕಾರ್ಕಳ (ಎರಡೂ ಉಡುಪಿ ಜಿಲ್ಲೆ), ಮಂಗಳೂರು, ಉಪ್ಪಿನಂಗಡಿ, ಮೂಲ್ಕಿ (ದಕ್ಷಿಣ ಕನ್ನಡ ಜಿಲ್ಲೆ), ಕದ್ರಾ (ಉತ್ತರ ಕನ್ನಡ ಜಿಲ್ಲೆ), ಕೆಂಭಾವಿ (ಯಾದಗಿರಿ ಜಿಲ್ಲೆ), ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಗಬ್ಬೂರು (ರಾಯಚೂರು ಜಿಲ್ಲೆ), ಆಳಂದ, ಸೇಡಂ (ಎರಡೂ ಕಲಬುರಗಿ ಜಿಲ್ಲೆ), ಕಳಸ (ಚಿಕ್ಕಮಗಳೂರು ಜಿಲ್ಲೆ), ಗುಬ್ಬಿ, ತಿಪಟೂರು (ತುಮಕೂರು ಜಿಲ್ಲೆ) ಚಿತ್ರದುರ್ಗ, ಕುಡತಿನಿ (ಬಳ್ಳಾರಿ ಜಿಲ್ಲೆ) ತಲಾ 2 ಸೆಂ. ಮೀ. ಮಳೆಯಾಗಿದೆ.

ಕಾರವಾರ, ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಕಿರವತ್ತಿ, ಮುಂಡಗೋಡ ಯಲ್ಲಾಪುರ, ಮಂಚಿಕೆರೆ (ಉತ್ತರ ಕನ್ನಡ ಜಿಲ್ಲೆ), ಜಾಲಹಳ್ಳಿ (ರಾಯಚೂರು ಜಿಲ್ಲೆ), ಮಹಾಗೋಣ, ಮುಧೋಳೆ, ಗುಂಡಗುರ್ತಿ, ಆಡಕಿ (ಕಲಬುರಗಿ ಜಿಲ್ಲೆ), ದೇವದುರ್ಗ), ಕವಡಿಮಟ್ಟಿ ಅರ್ಗ (ಯಾದಗಿರಿ ಜಿಲ್ಲೆ), ಭಾಲ್ಕಿ , ಮಂಠಾಳ (ಬೀದರ್ ಜಿಲ್ಲೆ), ಹಾವೇರಿ, ಚಿಕ್ಕಬಳ್ಳಾಪುರ, ಕಡೂರು (ಚಿಕ್ಕಮಗಳೂರು ಜಿಲ್ಲೆ), ಕೋಲಾರ, ಲಿಂಗನಮಕ್ಕಿ ಎಚ್‌ಎಂಎಸ್, ತಾಳಗುಪ್ಪ, ತ್ಯಾಗರ್ತಿ (ಶಿವಮೊಗ್ಗ ಜಿಲ್ಲೆ), ಯಗಟಿ (ಚಿಕ್ಕಮಗಳೂರು), ಯಗಟಿ (ಚಿಕ್ಕಮಗಳೂರು), ವಿಮಾನ ನಿಲ್ದಾಣ, ಹೊಸಕೋಟೆ (ಬೆಂಗಳೂರು ಗ್ರಾಮಾಂತರ) ತಲಾ 1 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ ವಿವಾದವನ್ನು ರೈತರ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details