ಬೆಂಗಳೂರು :ನೈರುತ್ಯ ಮುಂಗಾರು ಚುರುಕಾಗಿದ್ದು, ಸೆಪ್ಟೆಂಬರ್ 25 ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಂಗಳೂರಲ್ಲಿ ಕೂಡ ಗುಡುಗು ಸಹಿತ ಮಳೆಯಾಗಲಿದೆ ಎಂದಿದೆ. ವಿಜಯಪುರ ಜಿಲ್ಲೆಯಲ್ಲಿ ಒಂದೆರಡು ಕಡೆ ಭಾರಿ ಮಳೆ ಆಗಲಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮತ್ತು ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ ಮತ್ತು ರಾಯಚೂರಲ್ಲೂ ಲಘು ಮಳೆಯಾಗಲಿದೆ. ಇನ್ನು ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾದರೆ, ಹಾಸನ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಇರಲಿದೆ ಎಂದು ಹೇಳಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ ಇಲ್ಲ: ಕರಾವಳಿಯಲ್ಲಿ ಬಿರುಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ. ಆದರೆ ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ.
ಎಲ್ಲೆಲ್ಲಿ ಅತಿ ಹೆಚ್ಚು ಮಳೆ :ಇಂದು ರಾಯಚೂರು ಜಿಲ್ಲೆಯ ಕುರುಡಿ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಅತಿ 9 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ, ಸಿಂಧನೂರು, ಹುಣಸಗಿಯಲ್ಲಿ ತಲಾ 7 ಸೆಂ.ಮೀ ಮಳೆ ಸುರಿದಿದೆ.
ಮುಖ್ಯ ಮಳೆ ಪ್ರಮಾಣಗಳು: ಪಣಂಬೂರು, ಮೂಲ್ಕಿ, ಮಾಣಿ, ಪುತ್ತೂರು ಎಚ್‌ಎಂಎಸ್ (ಎಲ್ಲ ದಕ್ಷಿಣ ಕನ್ನಡ ಜಿಲ್ಲೆ), ಜಾಲಹಳ್ಳಿ (ರಾಯಚೂರು ಜಿಲ್ಲೆ), ಕಕ್ಕೇರಿ (ಯಾದಗಿರಿ ಜಿಲ್ಲೆ), ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ) ತಲಾ 6 ಸೆಂ. ಮೀ; ಕಾರ್ಕಳ (ಉಡುಪಿ ಜಿಲ್ಲೆ), ಮಾನ್ವಿ (ರಾಯಚೂರು ಜಿಲ್ಲೆ), ಶಹಪುರ (ಯಾದಗಿರಿ ಜಿಲ್ಲೆ), ಗೌರಿಬಿದನೂರು (ಚಿಕಬಳ್ಳಾಪುರ ಜಿಲ್ಲೆ) ತಲಾ 5ಸೆಂ. ಮೀ; ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಉಡುಪಿ, ಕುಷ್ಟಗಿ (ಕೊಪ್ಪಳ ಜಿಲ್ಲೆ), ಶಿಡ್ಲಘಟ್ಟ (ಚಿಕಬಳ್ಳಾಪುರ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ)
ತಲಾ 4ಸೆಂ. ಮೀ; ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ) ಕೆಂಭಾವಿ, ಶೋರಾಪುರ (ಎರಡೂ ಯಾದಗಿರಿ ಜಿಲ್ಲೆ), ನಾಲ್ವತವಾಡ (ವಿಜಯಪುರ ಜಿಲ್ಲೆ), ರಾಯಚೂರು, ಬೇವೂರು (ಕೊಪ್ಪಳ ಜಿಲ್ಲೆ), ದೇವದುರ್ಗ (ರಾಯಚೂರು ಜಿಲ್ಲೆ), ತೊಂಡೆಭಾವಿ (ಚಿಕ್ಕಬಳ್ಳಾಪುರ ಜಿಲ್ಲೆ), ಚಿಕ್ಕಬಳ್ಳಾಪುರ ರಾಯಲ್ಪಾಡು (ಕೋಲಾರ ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಶೃಂಗೇರಿ ಎಚ್‌ಎಂಎಸ್, ಕಳಸ (ಎರಡೂ ಚಿಕ್ಕಮಗಳೂರು ಜಿಲ್ಲೆ) , ತ್ಯಾಗರ್ತಿ (ಶಿವಮೊಗ್ಗ ಜಿಲ್ಲೆ) , ಕೋಲಾರ ತಲಾ 3 ಮಂಗಳೂರು, ಸುಳ್ಯ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಕುಂದಾಪುರ, ಕೋಟ (ಎರಡೂ ಉಡುಪಿ ಜಿಲ್ಲೆ), ಕಾರವಾರ, ಗೋಕರ್ಣ, ಹೊನ್ನಾವರ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಆಲಮಟ್ಟಿ ಎಚ್‌ಎಂಎಸ್ (ವಿಜಯಪುರ ಜಿಲ್ಲೆ) , ಸೇಡಂ (ಕಲಬುರ್ಗಿ ಜಿಲ್ಲೆ) , ತಾವರಗೇರ (ಕೊಪ್ಪಳ ಜಿಲ್ಲೆ), ಕವಡಿಮಟ್ಟಿ (ಯಾದಗಿರಿ ಜಿಲ್ಲೆ), ಮಸ್ಕಿ (ರಾಯಚೂರು ಜಿಲ್ಲೆ), ದೊಡ್ಡಬಳ್ಳಾಪುರ, ದೇವನಹಳ್ಳಿ (ಎರಡೂ ಬೆಂಗಳೂರು ಗ್ರಾಮಾಂತರ ಜಿಲ್ಲೆ), ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ನಗರ ಜಿಲ್ಲೆ), ಜಯಪುರ (ಚಿಕ್ಕಮಗಳೂರು)
ತಲಾ 2ಸೆಂ. ಮೀ; ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ) , ಕದ್ರಾ, ಶಿರಾಲಿ, ಮಂಕಿ, ಕಿರವತ್ತಿ, ಕುಮಟಾ, ಯಲ್ಲಾಪುರ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ನಾರಾಯಣಪುರ ಎಚ್‌ಎಂಎಸ್ (ಯಾದಗಿರಿ ಜಿಲ್ಲೆ), ಗಬ್ಬೂರು (ರಾಯಚೂರು ಜಿಲ್ಲೆ) , ತುಮಕೂರು, ಎನ್ಆರ್ ಪುರ, ಕೊಟ್ಟಿಗೆಹಾರ(ಎರಡೂ ಚಿಕ್ಕಮಗಳೂರು ಜಿಲ್ಲೆ), ವಿರಾಜಪೇಟೆ, ಪೊನ್ನಂಪೇಟೆ ಪಿಡಬ್ಲ್ಯೂಡಿ, ನಾಪೋಕ್ಲು (ಎಲ್ಲಾ ಕೊಡಗು ಜಿಲ್ಲೆ) ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ), ಬಿ ದುರ್ಗ (ಚಿತ್ರದುರ್ಗ ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ತಾಳಗುಪ್ಪ, ಹುಂಚದಕಟ್ಟೆ (ಎರಡೂ ಶಿವಮೊಗ್ಗ ಜಿಲ್ಲೆ) , ಹರಪನಹಳ್ಳಿ (ವಿಜಯನಗರ ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ), ಚಿತ್ರದುರ್ಗ, ಸಂತೆಬೆನ್ನೂರು (ದಾವಣಗೆರೆ ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆದ ನೈರುತ್ಯ ಮುಂಗಾರು: ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್