ಕರ್ನಾಟಕ

karnataka

ETV Bharat / state

ಜೂನ್​ 2ನೇ ವಾರದಲ್ಲಿ ನೈರುತ್ಯ ಮಾನ್ಸೂನ್ ರಾಜ್ಯಕ್ಕೆ ಪ್ರವೇಶ

ಜೂನ್​ 2ನೇ ವಾರದಲ್ಲಿ ನೈರುತ್ಯ ಮಾನ್ಸೂನ್ ಪ್ರವೇಶಿಸಲಿದ್ದು, ಪೂರ್ವ ಮುಂಗಾರು ಮಳೆ ಕರಾವಳಿ ಜಿಲ್ಲೆಗಳಲ್ಲಿ ಮೇ 28 ರಿಂದ ಜೂನ್ 1ರವರೆಗೂ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಜೂನ್​ 2ನೇ ವಾರದಲ್ಲಿ ನೈರುತ್ಯ ಮಾನ್ಸೂನ್ ಪ್ರವೇಶ
ಜೂನ್​ 2ನೇ ವಾರದಲ್ಲಿ ನೈರುತ್ಯ ಮಾನ್ಸೂನ್ ಪ್ರವೇಶ

By

Published : May 28, 2021, 5:27 PM IST

ಬೆಂಗಳೂರು:ನೈರುತ್ಯ ಮಾನ್ಸೂನ್ ಮೇ 31ರಂದು ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ವಾರದ ಬಳಿಕ ರಾಜ್ಯಕ್ಕೂ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಪೂರ್ವ ಮುಂಗಾರು ಮಳೆ ಕರಾವಳಿ ಜಿಲ್ಲೆಗಳಲ್ಲಿ ಮೇ 28 ರಿಂದ ಜೂನ್ 1ರವರೆಗೂ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಲಿದೆ. ಕರ್ನಾಟಕದ ಒಳನಾಡಿನಲ್ಲಿ ಮೇ. 28, 29 ರಂದು ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಮೇ 30 ರಿಂದ ಜೂನ್ 1 ರವರೆಗೆ ಕೆಲವು ಕಡೆ ಮಳೆಯಾಗಲಿದೆ. ಬೆಂಗಳೂರಿ‌ಲ್ಲಿ ಕನಿಷ್ಠ ಉಷ್ಣಾಂಶ 20 ಡಿಗ್ರಿ ಹಾಗೂ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ.

ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಶಿರಸಿಯಲ್ಲಿ 5 ಸೆಂ.ಮೀ, ಕಾರವಾರ 2 ಸೆಂ.ಮೀ, ಹೊನ್ನಾವರ 1 ಸೆಂ.ಮೀ, ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಡ್​ ಖಾಲಿ ಇದ್ರೂ ನೆಲದ ಮೇಲೆ ಸೋಂಕಿತರಿಗೆ ಆಮ್ಲಜನಕ : ಏನಿದು ಸಾರ್ವಜನಿಕರ ಆಸ್ಪತ್ರೆ ಅವ್ಯವಸ್ಥೆ

ABOUT THE AUTHOR

...view details