ಕರ್ನಾಟಕ

karnataka

ETV Bharat / state

ಕೆಣಕಿದ್ರೆ ಕಲ್ಲಾಸ್​​, ಮುಟ್ಟಿದ್ರೆ ಮಟಾಶ್​​... ನಾರಿಮಣಿಯರಿಗೆ ರೋಹಿಣಿ ಕಟೋಚ್​ ಸೆಲ್ಫ್​ ಡಿಫೆನ್ಸ್​ ಟ್ರೈನಿಂಗ್​ - ಮಹಿಳಾ ಪೊಲೀಸ್​ ಸಿಬ್ಬಂದಿ

ಶಕ್ತಿ ಟೀಂ ಅನ್ನೋ ಹೆಸರನ್ನ ಇಟ್ಟುಕೊಂಡು ದಕ್ಷಿಣ ವಿಭಾಗದ‌ ಸಿಬ್ಬಂದಿಗೆ ಟ್ರೈನಿಂಗ್ ನೀಡ್ತಾ ಹಾಗೆ ಸಾರ್ವಜನಿಕರು ಶಾಲಾ ಕಾಲೇಜುಗಳಿಗೂ ತೆರಳಿ ಮಹಿಳಾ ಪೊಲೀಸ್​ ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೂ ಇದರ ಬಗ್ಗೆ ಅರಿವು ಮೂಡಿಸಲು ರೋಹಿಣಿ ಸಪೇಟ್ ಮುಂದಾಗಿದ್ದಾರೆ.

women-police
women-police

By

Published : Mar 3, 2020, 12:06 PM IST

Updated : Mar 3, 2020, 12:35 PM IST

ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ, ಹಾಗೆ ಆರೋಪಿಗಳು ಆಟ್ಯಾಕ್ ಮಾಡಿದಾಗ ಯಾವ ರೀತಿ ತಮ್ಮನ್ನ ರಕ್ಷಣೆ ಮಾಡಬೇಕು ಅನ್ನೋ ದೃಷ್ಟಿಯಿಂದ. ಈಗಾಗ್ಲೇ ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಇಶಾ ಪಂತ್ ತಮ್ಮ ಸಿಬ್ಬಂದಿಗೆ ‌ಸೆಲ್ಫ್ ಡಿಫೆನ್ಸ್ ಟ್ರೈನಿಂಗ್ ನೀಡಿ ತಮ್ಮನ್ನ ತಾವು ಯಾವ ರೀತಿ ರಕ್ಷಣೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದರು.

'ಶಕ್ತಿ ಟೀಂ'

ಸದ್ಯ ಇದೇ ರೀತಿಯ ಫ್ಲಾನ್​ನನ್ನು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೇಟ್ ಕೂಡ ಮಾಡಲು ಮುಂದಾಗಿದ್ದು, ಶಕ್ತಿ ಟೀಂ ಅನ್ನೋ ಹೆಸರನ್ನ ಇಟ್ಟುಕೊಂಡು ದಕ್ಷಿಣ ವಿಭಾಗದ‌ ಸಿಬ್ಬಂದಿಗೆ ಟ್ರೈನಿಂಗ್ ನೀಡ್ತಾ ಹಾಗೆ ಸಾರ್ವಜನಿಕರು ಶಾಲಾ ಕಾಲೇಜುಗಳಿಗೂ ತೆರಳಿ ಮಹಿಳಾ ಪೊಲೀಸ್​ ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೂ ಇದರ ಬಗ್ಗೆ ಅರಿವು ಮೂಡಿಸಲು ರೋಹಿಣಿ ಸಪೇಟ್ ಮುಂದಾಗಿದ್ದಾರೆ.

ಇನ್ನು ಇದರ ಕುರಿತು ರೋಹಿಣಿ‌ ಸಫೇಟ್ ಮಾತಾಡಿ ಸೆಲ್ಫ್ ಡಿಫೆನ್ಸ್ ನೀಡೋದ್ರಿಂದ ಮಹಿಳಾ ಸಿಬ್ಬಂದಿಗೆ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚಾಗುತ್ತೆ. ಹಾಗೆ ಪುರುಷರಂತೆ ಮಹಿಳೆಯರು ಎಲ್ಲಾ‌ಕಡೆ ಓಡಾಡಿ ತಮ್ಮನ್ನ ತಾವು ರಕ್ಷಣೆ ಮಾಡಬಹುದು. ಅಲ್ಲದೆ ಇದನ್ನು ಕೇವಲ ಪೊಲೀಸ್ ಸಿಬ್ಬಂದಿಗೆ ಮಾತ್ರ ಅಲ್ಲ, ಟ್ರೈನಿಂಗ್ ತೆಗೆದುಕೊಂಡ ಸಿಬ್ಬಂದಿಯೂ ಕಾಲೇಜಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳಿಸಲಿದ್ದಾರೆ ಎಂದರು.

Last Updated : Mar 3, 2020, 12:35 PM IST

ABOUT THE AUTHOR

...view details