ಬೆಂಗಳೂರು:ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನಗರದ ಪೊಲೀಸರು ಸೋಂಕು ತಡೆಗಟ್ಟಲು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.
ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಸ್ಯಾನಿಟೈಸ್ ಮಾಡಲು ನಗರ ದಕ್ಷಿಣ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಎಂಐಟಿ ವಿಭಾಗದ ತಂಡವು ಬಹುಯೋಪಯೋಗಿ ಡ್ರೋನ್ ಆವಿಷ್ಕರಿಸಿದೆ.
ದಕ್ಷಿಣ ವಿಭಾಗ ಪೊಲೀಸರ ವಿನೂತನ ಪ್ರಯತ್ನ: ಡ್ರೋನ್ ಮೂಲಕ ಔಷಧಿ ಸಂಪಡಣೆಗೆ ಸಿದ್ಧತೆ ಈ ಡ್ರೋನ್ ಮೂಲಕ ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮೇಲಿನಿಂದಲೇ ರಾಸಾಯನಿಕ ಸಿಂಪಡಣೆ ಮಾಡಬಹುದಾಗಿದೆ. ಡ್ರೋನ್ನಲ್ಲಿ ರಾಸಾಯನಿಕ ತುಂಬಿಕೊಂಡು ಎಲ್ಲೆಂದರಲ್ಲಿ ಸಿಂಪಡಿಸಬಹುದಾಗಿದೆ.
ಪ್ರಾಯೋಗಿಕವಾಗಿ ನಾಳೆ ದಕ್ಷಿಣ ವಿಭಾಗದಲ್ಲಿ ಡ್ರೋನ್ ಮೂಲಕ ಸ್ಯಾನಿಟೈಸ್ ಮಾಡಲು ಯೋಜನೆ ರೂಪಿಸಿಕೊಂಡಿದ್ದು, ನಾಳೆ ಅಧಿಕೃತವಾಗಿ ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.