ಬೆಂಗಳೂರು:ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಆಗಮನದಿಂದಾಗಿ ದ.ಆಫ್ರಿಕಾದ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದೆ. ಪ್ರವಾಸೋದ್ಯಮದಿಂದಾಗಿ ದೇಶವು ಕಳೆದ ವರ್ಷ ಶೇ.53ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷ ಶೇ.64ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ ಎಂದು ದ. ಆಫ್ರಿಕಾದ ಪ್ರವಾಸೋದ್ಯಮ ಇಲಾಖೆ ಮುಖ್ಯಸ್ಥೆ ನೆಲಿಸ್ಚಾ ನ್ಕಾನಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವನ್ಯಜೀವಿ, ಸಾಹಸ, ಚಲನಚಿತ್ರ ಪ್ರವಾಸೋದ್ಯಮ, ಸಾಂಸ್ಕೃತಿಕ ನೆಲೆ ಸೇರಿದಂತೆ ವೈವಿಧ್ಯಮಯ ಸ್ಥಳಗಳಿರುವ ದ.ಆಫ್ರಿಕಾ ಭಾರತೀಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ವ್ಯಾಪಾರ-ವಹಿವಾಟು ಹೂಡಿಕೆಗೆ ಸೂಕ್ತ ದೇಶವಾಗಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿದೆ ಎಂದರು.