ಕರ್ನಾಟಕ

karnataka

ETV Bharat / state

ತಡರಾತ್ರಿ ಆಕ್ಸಿಜನ್ ಪ್ಲಾಂಟ್ ಸೋರಿಕೆ ತಡೆಗಟ್ಟಿ ರೋಗಿಗಳ ಪಾಲಿಗೆ ದೇವರಾದ ಸೋನು ಸೂದ್ ಟ್ರಸ್ಟ್ - ಆಕ್ಸಿಜನ್ ಪ್ಲಾಂಟ್ ಸೋರಿಕೆ

ಖಾಸಗಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​ನಲ್ಲಿ ಸಂಭವಿಸಿದ ಸೋರಿಕೆ ತಡೆಗಟ್ಟುವ ಮೂಲಕ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ.

sonu sood trust repaired oxygen plant at Midnight
ಆಕ್ಸಿಜನ್ ಪ್ಲಾಂಟ್ ಸರಿಪಡಿಸಿದ ಸೋನು ಸೂದ್ ಟ್ರಸ್ಟ್

By

Published : May 13, 2021, 10:22 AM IST

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​ನಲ್ಲಿ ಸೋರಿಕೆ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿ ಬಂದ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ದೊಡ್ಡ ಅನಾಹುತ ತಪ್ಪಿಸಿದರು.

ಮಹಾಲಕ್ಷ್ಮಿ ಲೇಔಟ್​ನ ಶ್ರೇಯಸ್ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್​​ನಲ್ಲಿ ತಡರಾತ್ರಿ 12 ಗಂಟೆ ವೇಳೆಗೆ ಸೋರಿಕೆಯಾಗಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು, ಪೊಲೀಸರ ಮಾಹಿತಿ ಮೇರೆಗೆ ಅಗ್ನಿಶಾಮಕ ತಂಡದ ಸಿಬ್ಬಂದಿ ಹಾಗೂ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್​ನ ಸದಸ್ಯರು ಸ್ಥಳಕ್ಕೆ ಬಂದು, ಸೋರಿಕೆಯಾಗಿದ್ದ ಆಕ್ಸಿಜನ್ ಪ್ಲಾಂಟ್ ಸರಿಪಡಿಸಿ 6 ಜಂಬೋ ಸಿಲಿಂಡರ್ ತರಿಸಿ ರೋಗಿಗಳ ಪ್ರಾಣ ಕಾಪಾಡಿದ್ದಾರೆ.

ಇದನ್ನೂಓದಿ: ರಾಜ್ಯದಲ್ಲಿ ಮೊದಲ ಬಾರಿಗೆ ಮಂಡ್ಯದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ: ಸಚಿವ ನಾರಾಯಣ ಗೌಡ

ಶ್ರೇಯಸ್ ಆಸ್ಪತ್ರೆಯಲ್ಲಿ 30 ಕ್ಕೂ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಆಕ್ಸಿಜನ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿರಲಿಲ್ಲ.‌ ಅದರೆ ತಡರಾತ್ರಿ ಪ್ಲ್ಯಾಂಟ್​ನಲ್ಲಿ ಸೋರಿಕೆಯಾಗಿದೆ. ಎಸಿಪಿ ರೀನಾ ಸುವರ್ಣ ನೀಡಿದ ಮಾಹಿತಿ ಮೇರೆಗೆ ಅಗ್ನಶಾಮಕ ಸಿಬ್ಬಂದಿ ಜೊತೆ ಆಗಮಿಸಿದ ಸೋನು ಸೂದ್​ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಕೂಡಲೇ ಆರು ಜಂಬೊ ಆಕ್ಸಿಜನ್ ಸಿಲಿಂಡರ್ ತರಿಸಿ ಪ್ಲ್ಯಾಂಟ್ ರಿಪೇರಿ ಮಾಡಿಸಿಕೊಟ್ಟಿದ್ದಾರೆ.

ರೋಗಿಗಳ ಪ್ರಾಣ ರಕ್ಷಣೆ ಮಾಡಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೋನು ಸೋದ್ ಟ್ರಸ್ಟ್​​ಗೆ ಆಸ್ಪತ್ರೆ‌ಯ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ‌.

ABOUT THE AUTHOR

...view details