ಕರ್ನಾಟಕ

karnataka

ETV Bharat / state

ಸೋನಿಯಾ ಗಾಂಧಿ ಇಟಲಿ ಮೂಲ ಕೆದಕಿದ ವಿಚಾರ: ಸಿದ್ದು ಸವದಿ, ಪ್ರಿಯಾಂಕ್ ಖರ್ಗೆ ನಡುವೆ ಟಾಕ್ ವಾರ್ - Sonia Gandhi's Italian origin issue

ಕೋವಿಡ್​​ ಅನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ನಿಮ್ಮ ಸರ್ಕಾರ ಮಹಾರಾಷ್ಟ್ರದಲ್ಲಿ ಇತ್ತಲ್ಲಾ ಅಲ್ಲಿ ಏನಾಯ್ತು?. ಅಮೆರಿಕದಲ್ಲಿ ಏನಾಯ್ತು?. ನಿಮ್ಮ ನಾಯಕಿಯ ಮೂಲಸ್ಥಾನ ಇಟಲಿಯಲ್ಲಿ ಏನಾಯ್ತು? ಎಂದು ಸಿದ್ದು ಸವದಿ ಪ್ರಶ್ನಿಸಿದರು. ಇದಕ್ಕೆ ಪ್ರಿಯಾಂಕ್​ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಈ ವಿಚಾರವಾಗಿ ಇಬ್ಬರ ನಡುವೆ ಟಾಕ್ ವಾರ್ ಸಹ ನಡೆಯಿತು.

ಸಿದ್ದು ಸವದಿ, ಪ್ರಿಯಾಂಕ್ ಖರ್ಗೆ ನಡುವೆ ಟಾಕ್ ವಾರ್
ಸಿದ್ದು ಸವದಿ, ಪ್ರಿಯಾಂಕ್ ಖರ್ಗೆ ನಡುವೆ ಟಾಕ್ ವಾರ್

By

Published : Mar 18, 2022, 9:43 PM IST

ಬೆಂಗಳೂರು:ಸೋನಿಯಾಗಾಂಧಿ ಅವರ ಇಟಲಿ ಮೂಲ ಕೆದಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ನಡೆದ ಘಟನೆ ವಿಧಾನಸಭೆಯಲ್ಲಿ ಶುಕ್ರವಾರ ನಡೆಯಿತು.

ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದು ಸವದಿ ಅವರು, ಕೋವಿಡ್​​ಅನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ನಿಮ್ಮ ಸರ್ಕಾರ ಮಹಾರಾಷ್ಟ್ರದಲ್ಲಿ ಇತ್ತಲ್ಲಾ ಅಲ್ಲಿ ಏನಾಯ್ತು?. ದೊಡ್ಡಣ್ಣ ಅಮೆರಿಕದಲ್ಲಿ ಏನಾಯ್ತು?. ನಿಮ್ಮ ನಾಯಕಿಯ ಮೂಲ ಸ್ಥಾನ ಇಟಲಿಯಲ್ಲಿ ಏನಾಯ್ತು? ಎಂದು ಕಾಂಗ್ರೆಸ್ ಸದಸ್ಯರನ್ನು ಕೆಣಕಿದರು.


ಸಿದ್ದು ಸವದಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ, ಸೋನಿಯಾ ಗಾಂಧಿ ನಮ್ಮ ದೇಶದ ಚುನಾಯಿತ ಜನಪ್ರತಿನಿಧಿ. ಇಟಲಿಯಲ್ಲಿ ಎಂಪಿ ಆಗಲು ಸಾಧ್ಯನಾ? ಎಂದು ಪ್ರಶ್ನಿಸಿದರು. ಗೊತ್ತಿಲ್ವಾ, ಏನು ಜಾಣತನದಿಂದ ಮಾತನಾಡುತ್ತಿದ್ದೀರಾ?. ಉದ್ಯೋಗದ ಬಗ್ಗೆ ಮಾತನಾಡಿ, ಎಷ್ಟು ಜನಕ್ಕೆ ರಾಜ್ಯದಲ್ಲಿ ಉದ್ಯೋಗ ಕೊಡಿಸಿದ್ದೀರಾ?. ಕೋವಿಡ್​ನಿಂದ ಎಷ್ಟು ಜನ ಸತ್ತಿದ್ದಾರೆ ಸದನದಲ್ಲಿ ಹೇಳಿ ಎಂದು ಪ್ರಶ್ನಿಸಿದರು.

ಈ ವೇಳೆ ಪ್ರಿಯಾಂಕ್ ಖರ್ಗೆ ಹಾಗೂ ಸಿದ್ದು ಸವದಿ ನಡುವೆ ಮಾತಿನ ವಾಗ್ವಾದ ನಡೆಯಿತು. ರಾಜ್ಯದಲ್ಲಿ ಒಂದು ಉದ್ಯೋಗ ಸೃಷ್ಟಿ ಮಾಡ್ಲಿಲ್ಲ. ಎರಡು ವರ್ಷದಿಂದ ಮಹಾರಾಷ್ಟ್ರದ ಬಗ್ಗೆ ಹೇಳ್ತಾರೆ ಇವರು. ಮಹಾರಾಷ್ಟ್ರಕ್ಕೂ ಇದಕ್ಕೂ ಏನು ಸಂಬಂಧ ಎಂದರು.

ಉಚಿತವಾಗಿ ಕೊರೊನಾ ಲಸಿಕೆ ನೀಡಿದ ಮೋದಿ:ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ ಡೋಸ್ ಕೊಟ್ಟಿದ್ದಾರೆ.‌ ಫ್ರೀಯಾಗಿ ಕೊಟ್ರಾ ಇಲ್ವಾ ಹೇಳಿ ಎಂದು ಸಿದ್ದು ಸವದಿ ಹೇಳಿದರು. ರಾಜ್ಯ ಬಜೆಟ್ ಬಗ್ಗೆ ಮಾತನಾಡುವುದಾದ್ರೆ ಮಾತನಾಡಿ, ಬಹಿರಂಗವಾಗಿ ಹೇಳಿ ಮೋದಿಯವರು ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ. ನಿಮ್ಮ ರಾಜ್ಯ ಸರ್ಕಾರದಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ.‌ ಕಾರ್ಮಿಕ ಇಲಾಖೆಯಲ್ಲಿ 33 ಸಾವಿರ ಜಾಬ್ ಲೇಸ್ ಆಗಿದೆ. ಸುಮ್ಮನೆ ಮಾತನಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸಿದ್ದು ಸವದಿ, ನೇಕಾರರ ಸಾಲ ಮನ್ನಾ ಆಗಿದೆ. ‌ಆದರೆ ಇನ್ನೂ ಹಣ ಬಿಡುಗಡೆ ಮಾಡಬೇಕಿದೆ. ನಮ್ಮಲ್ಲಿ ನೇಕಾರ ಸಮೂಹ ಬಹಳ ದೊಡ್ಡದಿದೆ. ನಮ್ಮ ಕೂಗನ್ನು ಯಾರೂ ಕೇಳ್ತಿಲ್ಲ. ನೇಕಾರ್ ಸನ್ಮಾನ್ ಯೋಜನೆ ಕೊಟ್ಟಿದ್ದಾರೆ. ಆದರೆ ಬ್ಯಾಂಕ್ ಸಾಲ ಪಡೆಯಬೇಕಾದರೆ ಕಿರುಕುಳ ಕೊಡಲಾಗುತ್ತಿದೆ. ಇದನ್ನು ಸರ್ಕಾರ ಗಮನಹರಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅಂತರರಾಜ್ಯ ಜಲವಿವಾದ ಬಗ್ಗೆ ಸರ್ವಪಕ್ಷ ಸಭೆ: ಪ್ರತಿಪಕ್ಷ ಸದಸ್ಯರು ನೀಡಿದ ಸಲಹೆಗಳೇನು?

ಶೇ. 1 ರಷ್ಟು ರೈತರ ಸಾಲ ಮನ್ನಾ ಸರ್ಕಾರ ಮಾಡಬೇಕು. ಏತ ನೀರಾವರಿ ಯೋಜನೆ ಪ್ರಾರಂಭವಾಗಿಲ್ಲ. ಸಚಿವರ ಗಮನಕ್ಕೆ ತಂದ್ರೂ ಇನ್ನೂ ಆಗಿಲ್ಲ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ಸರ್ಕಾರಕ್ಕೆ ಗುದ್ದು ನೀಡಿದ ಆಡಳಿತ ಪಕ್ಷದ ಶಾಸಕ ಸಿದ್ದು ಸವದಿ:ಆಹಾರ ಇಲಾಖೆ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ. ಎಷ್ಟೋ ಬಡವರ ಬಿಪಿಎಲ್ ಕಾರ್ಡುಗಳ ರದ್ದು ಮಾಡಿದೆ. ಅಷ್ಟೇ ಅಲ್ಲ, ಬಡವರಾಗಿದ್ದರೂ ಸಹ ಅವರ ಬಿಪಿಎಲ್ ಕಾರ್ಡುಗಳ ಎಪಿಎಲ್ ಕಾರ್ಡುಗಳಾಗಿ ಬದಲಾಯಿಸಿದೆ. ಬಡ ಜನರು ಹೋಗಿ ಆಹಾರ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಹೊಸದಾಗಿ ಅರ್ಜಿ ಕೊಡಿ ಅಂತಾರೆ. ಹೊಸದಾಗಿ ಬಿಪಿಎಲ್ ಕಾರ್ಡಿಗೆ ಅರ್ಜಿ ಕೊಡಬೇಕು ಅಂದರೆ ಎಪಿಎಲ್ ಮಾಡಿರುವ ಕಾರ್ಡುಗಳನ್ನು ರದ್ದು ಮಾಡಿಸಿಕೊಂಡು ಬರಬೇಕು. ಅದಕ್ಕೆ ಮತ್ತೆ ಆರು ತಿಂಗಳು ಆ ಬಡವರು ಓಡಾಡಬೇಕು. ಅರ್ಹ ಬಡವರಿಗೂ ಕೂಡ ಇದರಿಂದ ಪಡಿತರ ಸಿಗುತ್ತಿಲ್ಲ. ನೀವು ಅನರ್ಹರಿಗೆ ಕೊಡಿ ಅಂತ ನಾನು ಕೇಳ್ತಿಲ್ಲ, ಆದರೆ ಅರ್ಹರ ಬಿಪಿಎಲ್ ಕಾರ್ಡುಗಳ ರದ್ದು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details