ಬೆಂಗಳೂರು: ಚಿಕಿತ್ಸೆ ಹಾಗೂ ಮೂಲಸೌಲಭ್ಯವಿಲ್ಲದೆ ಕಣ್ಣೇದುರೇ ಸೋಂಕಿತ ತಾಯಿಯನ್ನು ಕಳೆದುಕೊಂಡ ಮಗ, ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿರುವ ತಂದೆಯನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸಪಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಕಂಡು ಬಂದಿದೆ.
ಬಿಟಿಎಂ ಲೇಔಟ್ ಮೊದಲ ಹಂತದಲ್ಲಿ ಮನೆ ಮಾಡಿಕೊಂಡಿರುವ ಖಾಸಗಿ ಕಂಪನಿ ಉದ್ಯೋಗಿಯ ತಂದೆ ತಾಯಿಗೆ ಕೊರೊನಾ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಬೆಡ್ಗಳ ಅಭಾವದಿಂದ ಮನೆಯಲ್ಲಿ ಪೋಷಕರಿಗೆ ಉಸಿರಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಆಕ್ಸಿಜನ್ ಸಿಲಿಂಡರ್ ತಂದಿಟ್ಟಿದ್ದರು. ಕಳೆದ ಎರಡು - ಮೂರು ದಿನಗಳಿಂದ ಆಕ್ಸಿಜನ್ ವ್ಯವಸ್ಥೆ ಮನೆಯಲ್ಲೇ ಕಲ್ಪಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕನ ತಾಯಿ ನಿನ್ನೆಯೇ ಮೃತಪಟ್ಟಿದ್ದಾರೆ.