ಕರ್ನಾಟಕ

karnataka

ETV Bharat / state

ಜೈಲು ಪಾಲಾದ ಕೇರಳದ ಮಾಜಿ ಗೃಹ ಸಚಿವರ ಪುತ್ರ... ಮುಂದೆ ಕಾದಿದೆ ಎನ್​ಸಿಬಿ ಕಂಟಕ..! - Binesh Kodiyeri arrested

ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಮಗ ಬಿನೇಶ್‌ ಕೊಡಿಯೇರಿ ಸದ್ಯ ಜೈಲು ಪಾಲಾಗಿದ್ದಾನೆ. ಎನ್​ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ಬಿನೇಶ್ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಎನ್​ಸಿಬಿ ಗಮನಕ್ಕೆ ಬಂದಿದ್ದು, ಬಿನೇಶ್​ ಮೇಲೆ ಎನ್​ಸಿಬಿ ವಿಚಾರಣೆ ನಡೆಯಲಿದೆ.

Son of former Home Minister of Kerala is prisoned
ಜೈಲು ಪಾಲಾದ ಕೇರಳದ ಮಾಜಿ ಗೃಹ ಸಚಿವ ಪುತ್ರ.. ಮುಂದೆ ಕಾದಿದೆ ಎನ್​ಸಿಬಿ ಕಂಟಕ..!

By

Published : Nov 12, 2020, 10:29 AM IST

ಬೆಂಗಳೂರು:ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಪುತ್ರ ಬಿನೇಶ್‌ ಕೊಡಿಯೇರಿಯನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ‌ಡಲಾಗಿದೆ.

ಜೈಲು ಪಾಲಾದ ಕೇರಳದ ಮಾಜಿ ಗೃಹ ಸಚಿವ ಪುತ್ರ.. ಮುಂದೆ ಕಾದಿದೆ ಎನ್​ಸಿಬಿ ಕಂಟಕ..!

ಸದ್ಯ ಇಡಿ ತನಿಖೆ ಮುಕ್ತಾಯವಾಗಿದೆ. ಆದರೆ, ಇಂದಿನಿಂದ ಬಿನೇಶ್​​​ಗೆ ಎನ್​ಸಿಬಿ ಕಂಟಕ ಶುರುವಾಗಿದೆ. ಇಡಿ ಅಧಿಕಾರಿಗಳು ಬಿನೇಶ್ ಕೊಡಿಯೇರಿ ಅಕ್ರಮ ಹಣದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತನಿಖೆ ವೇಳೆ ಬಿನೇಶ್ ಬೆಂಗಳೂರು ಹಾಗೂ ಕೇರಳದಲ್ಲಿ ಐಷಾರಾಮಿ ಹೋಟೆಲ್ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಅಲ್ಲದೇ ಈ ಹೋಟೆಲ್​ಗಳಿಂದ ಬಿನೇಶ್ ಅಕೌಂಟ್​​ಗೆ ಬಹಳಷ್ಟು ಹಣ ಜಮಾವಣೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕೇವಲ ಹೋಟೆಲ್ ಉದ್ಯಮ ನಡೆಸಿ ಅಷ್ಟು ಹಣಗಳಿಸಲು ಸಾಧ್ಯವಿಲ್ಲ ಎಂಬ ಶಂಕೆಯಿಂದ ಈ ಹಣದ ಮೂಲ ಪತ್ತೆ ಹಚ್ಚುವ ಕೆಲಸವಾಗುತ್ತಿದೆ.

ಇನ್ನು ಎನ್​ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ಬಿನೇಶ್ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಎನ್​ಸಿಬಿ ಗಮನಕ್ಕೆ ಬಂದಿದೆ. ನಗರದ ಕಮ್ಮನಹಳ್ಳಿಯಲ್ಲಿರುವ ರೆಸ್ಟೋರೆಂಟ್​​ನಲ್ಲಿ ಡ್ರಗ್ ಪೆಡ್ಲಿಂಗ್ ನಡೆಯುತ್ತಿರುವ ವಿಚಾರಕ್ಕೆ ಬೇಕಾದ ಸಾಕ್ಷಿ ಎನ್​ಸಿಬಿ ಕೈಯಲ್ಲಿದೆ. ಹೀಗಾಗಿ ಸದ್ಯ ಎನ್​ಸಿಬಿ ಅಧಿಕಾರಿಗಳು ಬಿನೇಶ್ ಕೊಡಿಯೇರಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿರುವ ಮೊಹಮ್ಮದ್ ಅನೂಪ್ ಹಾಗೂ ಬಿನೇಶ್ ಕೊಡಿಯೇರಿಯ ತನಿಖೆ ಮಾಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.

ABOUT THE AUTHOR

...view details