ಕರ್ನಾಟಕ

karnataka

ETV Bharat / state

ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಡಾನ್ ಜಯರಾಜ್ ಪುತ್ರನ ಮನವಿ - ನಟ ಧನಂಜಯ್ ಅಭಿನಯದ ಹೆಡ್ ಬುಶ್ ಸಿನಿಮಾ

ಚಿತ್ರತಂಡ ಬಿಡುಗಡೆಗೊಳಿಸಿರುವ ಟ್ರೈಲರ್​ನಲ್ಲಿ ನಮ್ಮ ತಂದೆ ಜಯರಾಜ್ ಅವರನ್ನ ಕೆಟ್ಟ ವ್ಯಕ್ತಿಯಂತೆ ಬಿಂಬಿಸಲಾಗಿದೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನ ವಿರೋಧಿಸಿದವರು ಎಂದು ಪುತ್ರ ಅಜಿತ್​ ಅವರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ.

ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಡಾನ್ ಜಯರಾಜ್ ಪುತ್ರನ ಮನವಿ
ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಡಾನ್ ಜಯರಾಜ್ ಪುತ್ರನ ಮನವಿ

By

Published : May 4, 2022, 3:36 PM IST

Updated : May 4, 2022, 4:02 PM IST

ಬೆಂಗಳೂರು: ನಟ ಧನಂಜಯ್ ಅಭಿನಯದ ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಭೂಗತ ದೊರೆ ಎಂ.ಪಿ. ಜಯರಾಜ್ ಪುತ್ರ ಅಜಿತ್ ಜಯರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ನಟ ಡಾಲಿ ಧನಂಜಯ ನಟಿಸಿ ನಿರ್ಮಿಸುತ್ತಿರುವ ಹೆಡ್ ಬುಶ್ ಸಿನಿಮಾ ಮಾಜಿ ಭೂಗತ ದೊರೆ ಎಂ.ಪಿ‌. ಜಯರಾಜ್ ಜೀವನಾಧಾರಿತ ಕಥಾಹಂದರ ಹೊಂದಿದ್ದು, ಅಗ್ನಿ ಶ್ರೀಧರ್ ಕಥೆ ಬರೆದಿದ್ದಾರೆ.

ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಡಾನ್ ಜಯರಾಜ್ ಪುತ್ರನ ಮನವಿ

ಇದನ್ನೂ ಓದಿ: ಡೀಫಾಲ್ಟ್ ಜಾಮೀನು ಕೋರಿ ವರವರರಾವ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಹೆಡ್ ಬುಶ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಮಾಜಿ ಡಾನ್ ಜಯರಾಜ್ ಪುತ್ರನ ಮನವಿ

ಚಿತ್ರತಂಡ ಬಿಡುಗಡೆಗೊಳಿಸಿರುವ ಟ್ರೈಲರ್​ನಲ್ಲಿ ನಮ್ಮ ತಂದೆ ಜಯರಾಜ್ ರನ್ನ ಕೆಟ್ಟ ವ್ಯಕ್ತಿಯಂತೆ ಬಿಂಬಿಸಲಾಗಿದೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನ ವಿರೋಧಿಸಿದವರು ಎಂದಿದ್ದಾರೆ ಜಯರಾಜ್ ಪುತ್ರ. ಅಲ್ಲದೆ, ನಮ್ಮ ಕುಟುಂಬಸ್ಥರ ಅನುಮತಿ ಪಡೆಯದೇ ಚಿತ್ರ ಮಾಡಲು ಹೊರಟಿರುವುದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

Last Updated : May 4, 2022, 4:02 PM IST

ABOUT THE AUTHOR

...view details