ಬೆಂಗಳೂರು :ರಸ್ತೆ, ಶಾಲೆಯ ಕಾಂಪೌಂಡ್ ಮೇಲೆಲ್ಲಾ ಯಾರೋ ಕಿಡಿಗೇಡಿಗಳು sorry sorry ಎಂದು ಬರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸುಂಕದಕಟ್ಟೆಯ ಶಾಂತಿಧಾಮ ವಿದ್ಯಾಸಂಸ್ಥೆ ಶಾಲೆಯ ಕಾಂಪೌಂಡ್, ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ sorry ಎಂದು ಬರೆದು ಹುಚ್ಚಾಟ ನಡೆಸಿದ್ದಾರೆ.
ಬೆಂಗಳೂರು ರಸ್ತೆ ಮೇಲೆಲ್ಲಾ Sorry.. Sorry !
ಸೋಮವಾರ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳು ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ..
ಶಾಲೆ, ರಸ್ತೆ ಮೇಲೆಲ್ಲಾ Sorry..Sorry ಎಂದು ಬರೆದ ಕಿಡಿಗೇಡಿಗಳು
ಬೆಳ್ಳಂಬೆಳಗ್ಗೆ ಇದನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪದ ಬರೆದಿರುವವರ ಪತ್ತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ:ಸ್ವತಃ ವಾಹನ ಚಲಾಯಿಸಿ ಕಸ ಕೊಂಡೊಯ್ತಾರೆ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ
Last Updated : May 24, 2022, 12:03 PM IST