ಬೆಂಗಳೂರು:ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ಮುಸ್ಲಿಂ ಮುಖಂಡರೊಬ್ಬರು ಆವಾಜ್ ಹಾಕಿದ್ದಾರೆಂಬ ಚರ್ಚೆ ನಡೆದಿತ್ತು. ಈ ಸಂಬಂಧದ ವಿಡಿಯೋ ಕೂಡ ವೈರಲ್ ಆಗಿದೆ.
ಕಮಿಷನರ್ಗೆ ಆವಾಜ್ ಹಾಕಿದ ವಿಡಿಯೋ ವೈರಲ್ ಆ ವಿಡಿಯೋದಲ್ಲಿ ಮುಸ್ಲಿಂ ಮುಖಂಡನೊಬ್ಬ ಕಮಿಷನರ್ ಕಮಲ್ ಪಂತ್ ಜೊತೆ ಮಾತನಾಡಿ, ಇದೇ ಶುಕ್ರವಾರ ನಮಾಜ್ ಬರುತ್ತೆ. ಆದರೆ, ಒಂದೆಡೆ 144 ಸೆಕ್ಷನ್ ಜಾರಿ ಇದೆ. ಪೊಲೀಸರು ದಿನೇ - ದಿನೆ ಆರೆಸ್ಟ್ ಮಾಡ್ತಾನೆ ಇದ್ದಾರೆ. ಇದರಲ್ಲಿ ಅಮಾಯಕರು ಇದ್ದಾರೆ ಎಂದಿದ್ದಾರೆ.
ಯಾವ ಠಾಣೆಯಲ್ಲಿ ಆರೋಪಿಗಳು ಇದ್ದಾರೆ ಎಂಬುದು ಗೊತ್ತಿಲ್ಲ. ಅಮಾಯಕರಿಗೆ ಹೆಚ್ಚು ಕಮ್ಮಿ ಆದರೆ ಜವಾಬ್ದಾರಿ ಯಾರು ಎಂದು ಅವರು ಕಮಿಷನರ್ ಅವರನ್ನ ಇದೇ ವೇಳೆ ಪ್ರಶ್ನಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಸೇರಿ ಈ ಪ್ರಕರಣವನ್ನು ಬಗೆಹರಿಸಬೇಕೆಂದು ಪಂತ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಕಮಿಷನರ್ ಸ್ಪಷ್ಟನೆ:ನನಗೆ ಯಾರೂ ಆವಾಜ್ ಹಾಕಿಲ್ಲ ಎಂದು ಕಮಿಷನರ್ ಕಮಲ್ ಪಂತ್ ಸ್ಪಷ್ಟ ಪಡಿಸಿದ್ದಾರೆ. ಪರಿಸ್ಥಿತಿಯ ಕೆಲ ಗೊಂದಲಗಳ ಬಗ್ಗೆ ಮುಸ್ಲಿಂ ಮುಖಂಡರು ಮಾತನಾಡಿದ್ದಾರೆ ಎಂದು ಕಮಲ್ ಪಂತ್ ಹೇಳಿದ್ದಾರೆ.