ಕರ್ನಾಟಕ

karnataka

ETV Bharat / state

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ: ಲಿಂಬಾವಳಿ - ಅರವಿಂದ ಲಿಂಬಾವಳಿ ಆರೋಪ

ಕೆಲವು ರಾಜಕೀಯ ವಿರೋಧಿಗಳು ಬೆಳವಣಿಗೆಯನ್ನು ಸಹಿಸದೇ ನನ್ನ ಹಾಗೂ ಪಕ್ಷದ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ

By

Published : Jul 22, 2019, 12:30 PM IST

ಬೆಂಗಳೂರು: ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಬಿಜೆಪಿ ರಾಜಕೀಯ ಬೆಳವಣಿಗೆ ಕಂಡು ಈ ಷಡ್ಯಂತ್ರ ಹೆಣೆಯುತ್ತಿದ್ದಾರೆ. ಇದೀಗ ನನ್ನ ವಿರುದ್ಧವೂ ಪಿತೂರಿ ನಡೆಸಿದ್ದಾರೆ. ಕಾಂಗ್ರೆಸ್​- ಜೆಡಿಎಸ್ ನಾಯಕರೇ ಈ ಪಿತೂರಿಗೆ ಮೂಲ ಕಾರಣ. ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಸಹ ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ ಎಂದು ಲಿಂಬಾವಳಿ ದೂರಿದ್ದಾರೆ.

ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ

ದೋಸ್ತಿ ನಾಯಕರು ಯಾವ ರೀತಿ ಷಡ್ಯಂತ್ರ ಹೆಣೆದಿದ್ದಾರೆ ಅಂತ ಅದನ್ನು ಸಂದರ್ಭ ಬಂದಾಗ ತಿಳಿಸುತ್ತೇನೆ ಎಂದು ಲಿಂಬಾವಳಿ ಅವರು ಯಾವ ವಿಚಾರ ಅಂತ ಸ್ಪಷ್ಟವಾಗಿ ಹೇಳದೇ‌ ಕೇವಲ ಪ್ರತಿಕ್ರಿಯೆ ಮಾತ್ರ ನೀಡಿ ಸದನದೊಳಗೆ ನಿರ್ಗಮಿಸಿದರು.‌

ABOUT THE AUTHOR

...view details