ಬೆಂಗಳೂರು:ನಗರದಲ್ಲಿ ಏಕಕಾಲದಲ್ಲಿ ಹೈಪರ್ ಟೆನ್ಷನ್ ವಿದ್ಯುತ್ ಸಂಪರ್ಕಗಳನ್ನು ಭೂಗತವಾಗಿ ಅಳವಡಿಕೆ , ದೈನಂದಿನ ನಿರ್ವಹಣೆ ಕಾಮಗಾರಿ ಚಾಲ್ತಿಯಲ್ಲಿದ್ದು, ಎರಡು ದಿನ ಹಬ್ಬಕ್ಕೆ ಬ್ರೇಕ್ ಇರಲಿದೆ. ಶನಿವಾರದಿಂದ ಮತ್ತೆ ಕೆಲ ಪ್ರದೇಶಗಳಲ್ಲಿ ಇಡೀ ದಿನ ಪವರ್ ಕಟ್ ಸಮಸ್ಯೆ ಎದುರಾಗಲಿದೆ.
ಹಬ್ಬ ಮುಗಿದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಈ ಪ್ರದೇಶಗಳಿಗೆ ಪವರ್ ಶಾಕ್! - ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ಸಮಸ್ಯೆ
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಶನಿವಾರದಿಂದ ಮತ್ತೆ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಈ ಕುರಿತಂತೆ ಬೆಸ್ಕಾಂ ಮಾಹಿತಿ ನೀಡಿದೆ.
ಬೆಸ್ಕಾಂ
ಮುಂದಿನ ವಾರ ಬಿಟಿಎಮ್ ಲೇಔಟ್, ಬೊಮ್ಮನಹಳ್ಳಿ, ಹೆಚ್ಎಸ್ಆರ್ ಲೇಔಟ್, ಜಂಬೂಸವಾರಿ ದಿಣ್ಣೆಗಳಲ್ಲಿ ಪೂರ್ವನಿಯೋಜಿತ ಕಾಮಗಾರಿಗಳಿಗಾಗಿ ಪವರ್ ಕಟ್ ಮಾಡಲಾಗುವುದು. ಅಲ್ಲದೇ ಆ ದಿನ ಕಾಮಗಾರಿ ನಡೆದರೆ ಮಾತ್ರ ಪವರ್ ಕಟ್ ಇರಲಿದೆ. ಕಾರ್ಮಿಕರ ಸಮಸ್ಯೆ ಎದುರಾದರೆ ಆ ದಿನ ವಿದ್ಯುತ್ನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಪವರ್ ಕಟ್ ಆಗಲಿರುವ ಪ್ರದೇಶಗಳ ಮಾಹಿತಿ :
- ಅ.16 ರಂದು ಹೊಂಗಸಂದ್ರ 10 ರಿಂದ 16 ನೇ ಮುಖ್ಯ ರಸ್ತೆ, ಮೈಕೋಲೇಔಟ್,ಹೊಸ ರೋಡ್, ಹೆಚ್ಎಸ್ಆರ್ ಲೇಔಟ್, ನಾಯಕ್ ಲೇಔಟ್, ಸುರಭಿ ನಗರ, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.
- ಅ.18 ರಂದು ಎಲೆಕ್ಟ್ರಾನಿಕ್ ಸಿಟಿ, ಸಿಬಿ ಗೇಟ್, ನಾಗನಾಥಪುರ, ಕೋನಪ್ಪನ ಅಗ್ರಹಾರ, ಎಚ್ಎಸ್ಆರ್ ಲೇಔಟ್
- ಅ. 19 ರಂದು ಅಗರ ಕೆರೆ, ಜಕ್ಕಸಂದ್ರ
- ಅ.21 ರಂದು ನಾಯಕ್ ಲೇಔಟ್, ಸುರಭೀನಗರ, ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ಮೀನಾಕ್ಷಿಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹೆಚ್ಎಸ್ಆರ್ ಲೇಔಟ್ ಮುಂತಾದೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ.
- ಅ. 22 ರಂದು, ನಾಗನಾಥಪುರ, ಬೊಮ್ಮನಹಳ್ಳಿ, ಹೆಚ್ಎಸ್ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಕೋರಮಂಗಲ, ಹೊಸಪಾಳ್ಯ, ಕೈಗೊಂಡನಹಳ್ಳಿ ಮುಂತಾದೆಡೆ ಪವರ್ ಕಟ್ ಇರಲಿದೆ.