ಬೆಂಗಳೂರು:ಇಡೀ ಕರುನಾಡೇ ಮೆಚ್ಚಿಕೊಂಡ ಶತಾಯುಷಿ ದೊರೆಸ್ವಾಮಿಯವರು 'ಹೋರಾಟಗಾರ' ಎಂಬುದಕ್ಕೆ ಅಪಸ್ವರಗಳು ಕೂಡ ಕೇಳಿ ಬಂದಿದ್ದವು. ಆದರೆ ರಾಜ್ಯದ ಬಹುತೇಕ ಜನರು ಮಾತ್ರ ಇವರನ್ನು ಹೋರಾಟಗಾರರನ್ನಾಗಿಯೇ ಸ್ವೀಕಾರ ಮಾಡಿದರು.
ಹೀಗಾಗಿಯೇ, ದೊರೆಸ್ವಾಮಿಯವರು ಕರೆ ನೀಡುತ್ತಿದ್ದ ಹೋರಾಟಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬೆಂಬಲಿಸುತ್ತಿದ್ದರು. ಹೋರಾಟಗಾರರು ಎನ್ನುವ ದಾಖಲೆಯಿಲ್ಲ ಎಂಬ ಕಾರಣಕ್ಕೆ ಹಲವು ಮುಖಂಡರು ಅವರ ಹೋರಾಟದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರು.
ಅದಕ್ಕೆ ತಕ್ಕಂತೆ ಆ ಟೀಕೆಯನ್ನೂ ಹಲವರು ವಿರೋಧಿಸಿದ್ದು ಇದೆ. ಆದರೆ ಇದ್ಯಾವುದನ್ನು ಕ್ಯಾರೆ ಮಾಡದೇ ಹೋರಾಟಗಳನ್ನು ಮಾಡಿದರು. ಅವರು ಹೋರಾಟಗಾರರಲ್ಲ, ಹೋರಾಟಗಾರರಿಗೆ ನೀಡುವ ವಿಶೇಷ ಸೌಲಭ್ಯವನ್ನು ಕಡಿತಗೊಳಿಸಿ ಎಂದು ಹಲವರು ಒತ್ತಾಯ ಮಾಡಿದ್ದು ಸಹ ಇದೆ.
ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಉತ್ತರವಾಗಿ ಸರ್ಕಾರ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ. ಹಾಗೇಯೇ ದೊರೆಸ್ವಾಮಿ ಅವರು ಯಾವುದೇ ಪುರಾವೆ ಒದಗಿಸದ ಕಾರಣ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿತ್ತು.