ಕರ್ನಾಟಕ

karnataka

ETV Bharat / state

Somanna-Yatnal discussion: ಸೋಮಣ್ಣ - ಯತ್ನಾಳ್ ಗುಸು ಗುಸು ಬಹಿರಂಗ!

ಹಾನಗಲ್ ಉಪಚುನಾವಣೆ (Hanagal byelection)​ ಗೆಲುವಿನ ಬಗ್ಗೆ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಚರ್ಚೆ (Somanna and Yatnal discuss) ಮಾಡಿರುವುದು ಇದೀಗ ಬಹಿರಂಗವಾಗಿದೆ.

Somanna and Yatnal discuss Revealed, Somanna and Yatnal discuss Revealed about Hanagal by election, Somanna and Yatnal discuss Revealed news, Hanagal by election, Hanagal by election news, ಸೋಮಣ್ಣ ಮತ್ತು ಯತ್ನಾಳ ಚರ್ಚೆ ಬಹಿರಂಗ, ಹಾನಗಲ್​ ಉಪಚುನಾವಣೆ ಕುರಿತು ಸೋಮಣ್ಣ ಮತ್ತು ಯತ್ನಾಳ ಚರ್ಚೆ ಬಹಿರಂಗ, ಸೋಮಣ್ಣ ಮತ್ತು ಯತ್ನಾಳ ಚರ್ಚೆ ಬಹಿರಂಗ ಸುದ್ದಿ, ಹಾನಗಲ್​ ಉಪಚುನಾವಣೆ, ಹಾನಗಲ್​ ಉಪಚುನಾವಣೆ ಸುದ್ದಿ,
ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಗುಸು ಗುಸು ಬಹಿರಂಗ

By

Published : Nov 11, 2021, 11:32 AM IST

ಬೆಂಗಳೂರು: ಹಾನಗಲ್ ಉಪಚುನಾವಣೆಯಲ್ಲಿ (Hanagal byelection)​ ನಮಗೆ ಹಾಕಿದ್ದರೆ ಆಕಿತ್ತು. ಆದರೆ ಯಾರಿಗೆ ಹೇಳೋಣ ಇದನ್ನು ಎಂದು ವಸತಿ ಸಚಿವ ವಿ. ಸೋಮಣ್ಣ ಮತ್ತು ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಚರ್ಚೆ (Somanna and Yatnal discuss) ಮಾಡಿರುವುದರ ಬಗ್ಗೆ ಬಿಜೆಪಿ ಪಾಳಯದಲ್ಲಿ (BJP Party) ಸಂಚಲನ ಮೂಡಿಸಿದೆ.

ವಿಧಾನಸೌಧದಲ್ಲಿ (Vidhana Soudha) ವಸತಿ ಸಚಿವ ವಿ.ಸೋಮಣ್ಣ (V Somanna) ಸುದ್ದಿಗೋಷ್ಠಿ ನಡೆಸಿದ್ದರು. ಮಾಧ್ಯಮಗೋಷ್ಠಿ (Press conference) ಮುಗಿದ ನಂತರ ಪಕ್ಕದಲ್ಲೇ ಇದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಜೊತೆ ಚರ್ಚೆ ಮಾಡಿದರು. ಹಾನಗಲ್ ಗೆಲ್ಲಿಸುವ ಬಗ್ಗೆ ಸೋಮಣ್ಣ ಮತ್ತೆ ಯತ್ನಾಳ್ ಪಿಸು ಪಿಸು (Somanna and Yatnal discuss) ಮಾತನಾಡಿದ್ದು, ಈಗ ಭಾರಿ ಸದ್ದು ಮಾಡುತ್ತಿದೆ.

ಪಿಸು ಮಾತಿನಲ್ಲೇನಿದೆ?: ಹಾನಗಲ್ ಉಪಚುನಾವಣೆ ( Hanagal bypoll) ನಮಗೆ ವಹಿಸಿದ್ದರೆ ಗೆಲ್ಲಿಸಬಹುದಿತ್ತು ಎಂದು ಇಬ್ಬರು ನಾಯಕರು ಗುಸು ಗುಸು ಮಾತನಾಡಿಕೊಂಡಿದ್ದಾರೆ. (Somanna and Yatnal discuss). ಹೌದು ನಮ್ಮಿಬ್ಬರನ್ನೇ ಹಾಕಿದ್ದಿದ್ರೆ ಸಾಕಿತ್ತು. ಆದರೆ ಯಾರಿಗೆ ಹೇಳೋಣ ಇದನ್ನು ಎಂದು ಸೋಮಣ್ಣ ಪಕ್ಷದ ನಾಯಕರ ಮೇಲೆ ಅಸಮಾಧಾನ ಹೊರ ಹಾಕಿದರು.

ಇದಕ್ಕೂ ಮುನ್ನ 135 ಸೀಟ್ ಗೆಲ್ಲಿಸದೇ ಇದ್ದರೆ ಕೇಳು ಅಂದಿದ್ದೆ ಎಂದು ಹೇಳಿದ್ದೆ ಎಂದಿದ್ದ ಸೋಮಣ್ಣ (Somanna) ಮಾತು ಬಹಿರಂಗವಾಗಿದೆ. ಆದರೆ, ಈ ಮಾತನ್ನು ಸೋಮಣ್ಣ ಯಾರಿಗೆ ಹೇಳಿದ್ದಾರೆ ಎಂದು ಸ್ಪಷ್ಟವಾಗಿ ಇಬ್ಬರ ಮಾತಲ್ಲಿ ಗೊತ್ತಾಗಿಲ್ಲ. ಆದರೆ, ಹಾನಗಲ್ ಉಪಚುನಾವಣೆಯಲ್ಲಿ (Hangal byelection) ಗೆಲ್ಲಿಸುವ ಹೇಳಿಕೆ ಕುರಿತು ಇಬ್ಬರು ಮಾತಾಡಿರುವ ಆಡಿಯೋ ಮಾಧ್ಯಮಗಳ (Media) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಸಿಂದಗಿ ಉಪಚುನಾವಣೆ (Sindagi bypoll) ಉಸ್ತುವಾರಿಯನ್ನು ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೊತ್ತಿದ್ದರು. ಸಿಂದಗಿಯಂತೆ ಹಾನಗಲ್ ಗೆಲ್ಲಿಸಬಹುದಿತ್ತು ಎಂದು ಇಬ್ಬರು ನಾಯಕರು ಚರ್ಚಿಸಿದ್ದಾರೆ. ಹಾನಗಲ್ ಸೋಲಿನ‌ ಬಗ್ಗೆ ಇಬ್ಬರಿಂದ ಭಾರಿ ಗುಸು - ಗುಸು ಇದೀಗ ಬಿಜೆಪಿ ಪಾಳಯದಲ್ಲಿ (BJP party) ಬಹು ಚರ್ಚಿತವಾಗುತ್ತಿದೆ.

ABOUT THE AUTHOR

...view details