ಬೆಂಗಳೂರು:ಕೇಂದ್ರ ಸರ್ಕಾರ ನಾಗಾ ಜನರ ಸಮಸ್ಯೆ ಬಗೆಹರಿಸಲು ಅಪನಂಬಿಕೆ ಬಿಟ್ಟು ಶಾಂತಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಶಾಂತಿ ಮಾತುಕತೆ ಮೂಲಕ ನಾಗಾ ಜನರ ಸಮಸ್ಯೆ ಬಗೆಹರಿಸಿ: ಪ್ರಧಾನಿಗೆ ದೇವೇಗೌಡ ಮನವಿ - ಪ್ರಧಾನಿ ಮೋದಿಗೆ ದೇವೆಗೌಡರ ಮನವಿ
ಶಾಂತಿ ಮಾತುಕತೆ ಮೂಲಕ ನಾಗಾ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಪ್ರಧಾನಿ ಮೋದಿಗೆ ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ವರಿಷ್ಠ ಹೆಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನಿರ್ಧಾರದ ಬಗ್ಗೆ ನಾನು ಪ್ರಶ್ನಿಸುವುದಿಲ್ಲ. ಮಾಧ್ಯಮಗಳ ವರದಿಗಳ ಪ್ರಕಾರ, ಕೇಂದ್ರ ಸರ್ಕಾರದ ವತಿಯಿಂದ ಮಾತುಕತೆ ನಡೆಸುವವರು ಅಪಾರ ನಂಬಿಕೆಯಿಂದ ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು ಸರಿಪಡಿಸಬೇಕು ಎಂದರು.
1997 ರಲ್ಲಿ ಐಸಾಕ್ ಚಿಸಿ ಸ್ವಾ ಮತ್ತು ತ್ಯುಂಗಲಂಗ್ ನಡುವೆ ನಡೆದ ಮಾತುಕತೆಯಿಂದ ಸಕಾರಾತ್ಮಕ ರಾಜತಾಂತ್ರಿಕ ತೀರ್ಮಾನಗಳಾಗಿದ್ದವು. ಕಳೆದ 23 ವರ್ಷಗಳ ಹಿಂದೆ ನಡೆದಿರುವ ಬೆಳವಣಿಗೆಯನ್ನು ಮುಂದಿನ ಸರ್ಕಾರಗಳು ಪಾಲಿಸಿಕೊಂಡು ಬರಲಿಲ್ಲ. ಸಂವಿಧಾನ ಮತ್ತು 2015 ರಲ್ಲಿ ಆಗಿರುವ ಒಪ್ಪಂದದಂತೆ ಮುನ್ನಡೆಯಬೇಕಿದೆ. ಅಲ್ಲದೆ ಅಪನಂಬಿಕೆಯನ್ನು ಪಕ್ಕಕ್ಕಿಟ್ಟು ಮಾತುಕತೆಯ ಮೂಲಕ ನಾಗಾ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಈ ಕುರಿತು ಪ್ರಧಾನಿ ಅವರಿಗೂ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಹೆಚ್ಡಿಡಿ ತಿಳಿಸಿದರು.