ಬೆಂಗಳೂರು :ಕಸ ವಿಂಗಡಣೆ ಸಾರ್ವಜನಿಕ ಕರ್ತವ್ಯವಾಗಿದ್ದು, ಕಸ ವಿಂಗಡಣೆಗೆ ಸರ್ಮಪಕವಾಗಿ ಸ್ಪಂದಿಸಿ ಕಸದ ಸಮಸ್ಯೆ ನಿವಾರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸುಭಾಷ್ ಆದಿ ತಿಳಿಸಿದರು.
ಮಹಾದೇವಪುರ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಸಭೆ
ಮಹಾದೇವಪುರ ವಲಯದ ರಾಮಮೂರ್ತಿ ನಗರದಲ್ಲಿ ಘನತಾಜ್ಯ ನಿರ್ವಹಣೆ ಕುರಿತು ಸಭೆ ನಡೆಸಲಾಗಿದ್ದು, ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ವೆಂಕಟಚಲಪತಿ, ಪಾಲಿಕೆ ಸದಸ್ಯರುಗಳು ಹಾಜರಿದ್ದರು.
ನಗರದ ಮಹಾದೇವಪುರ ವಲಯದ ರಾಮಮೂರ್ತಿ ನಗರದಲ್ಲಿ ಘನತಾಜ್ಯ ನಿರ್ವಹಣೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಕಸದ ಸಮಸ್ಯೆ ದೂರ ಮಾಡಲು ಸಾರ್ವಜನಿಕ ಕಾರ್ಯ ಬಹುಮುಖ್ಯವಾಗಿದ್ದು, ಪ್ರತಿನಿತ್ಯ ಕಸವನ್ನು ವಿಂಗಡಣೆಮಾಡುವುದರಿಂದ ಶೇ. 50ರಷ್ಟು ಕಸದ ಸಮಸ್ಯೆ ದೂರವಾಗಲಿದ್ದು,ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಗಮನ ಅರಿಸುಬೇಕು. ಇನ್ನು ವಾಡ್೯ ಮಟ್ಟದಲ್ಲಿ ಕಸ ನಿರ್ವಹಣೆ ಮಾಡಿ ಸಮಸ್ಯೆಗೆ ಮುಕ್ತಿ ನೀಡವಂತೆ ಸೂಚಿಸಿದರು.
ಈ ವೇಳೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಗಮನ ಹರಿಸಿ ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ವೆಂಕಟಚಲಪತಿ, ಪಾಲಿಕೆ ಸದಸ್ಯರುಗಳು ಹಾಜರಿದ್ದರು.