ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಹಾಗೂ ಸಾಗಾಣಿಕೆ ಗುತ್ತಿಗೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಬಿಬಿಎಂಪಿಯ 198 ವಾರ್ಡ್ಗಳ ಕಸ ವಿಲೇವಾರಿ ಟೆಂಡರ್ ಕಡತಗಳನ್ನು ಪರಿಶೀಲಿಸದೆ, ನ್ಯಾಯಯುತವಾಗಿ ಟೆಂಡರ್ ನೀಡಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆ ಮೌಲ್ಯಮಾಪನ ಮಾಡ ಕೈ ಬಿಡಲಾಗಿತ್ತು. ಆದ್ರೆ ಬಿಬಿಎಂಪಿಗೆ ಹೊಸದಾಗಿ ಬಂದಿರುವ ಆಯುಕ್ತರು, ಕೈ ಬಿಟ್ಟಿರುವ ಪ್ರಕ್ರಿಯೆಯನ್ನು ಬಿಬಿಎಂಪಿ ಕೌನ್ಸಿಲ್ ಸಭೆಯ ಗಮನಕ್ಕೆ ತರದೆ ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಅಲ್ಲದೆ ವರ್ಕ್ ಆರ್ಡರ್ ಕೊಟ್ಟಿರುವ ಬಗ್ಗೆ ಕೌನ್ಸಿಲ್ ಸಮಿತಿಗೆ ದಾಖಲಾತಿ ಕೊಟ್ಟಿದ್ದಾರೆ. ಆದ್ರೆ ಆ ದಾಖಲೆಗಳು ಬಿಬಿಎಂಪಿ ನಿಯಮಗಳ ಪ್ರಕಾರ ಕಾನೂನು ಬದ್ಧವಾಗಿ, ಕ್ರಮಬದ್ಧವಾಗಿ ಇಲ್ಲ ಎಂದರು.