ಬೆಂಗಳೂರು:ಭಾರತದಲ್ಲಿ 27 ವರ್ಷಗಳ ಬಳಿಕ ದೀಪಾವಳಿ ಹಬ್ಬದಂದೇ ಇಂದು ಕೇತುಗ್ರಸ್ತ ಸೂರ್ಯಗ್ರಹಣ ಗೋಚರ ಆಗುತ್ತಿದೆ. ರಾಜ್ಯದಲ್ಲಿ ಯಾವ ಸಮಯದಲ್ಲಿ ಗ್ರಹಣ ಗೋಚರವಾಗಲಿದೆ ಎಂಬುದರ ಬಗ್ಗೆ ಖಗೋಳ ಶಾಸ್ತ್ರಜ್ಞ ಡಾ.ಆನಂದ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಸಾಮಾನ್ಯ ಸೂರ್ಯಗ್ರಹಣ ಇದಾಗಿದೆ. ಬೆಂಗಳೂರಿನಲ್ಲಿ ಸಂಜೆ 5.12 ರಿಂದ ಗ್ರಹಣ ಶುರುವಾಗಲಿದೆ. ಸೂರ್ಯಾಸ್ತ ಆಗೋದ್ರಿಂದ ಇದು ಕಾಣುವುದು ಸ್ವಲ್ಪ ಕಷ್ಟ. ಸಂಜೆ 6.30 ರ ವರೆಗೆ ಗ್ರಹಣ ಇರಲಿದೆ. ದಿಗಂತದ ಹತ್ತಿರದಲ್ಲಿ ಇದು ಕಾಣಬಹುದು. ಬಯಲು ಪ್ರದೇಶ ಅಥವಾ ಸೂರ್ಯಾಸ್ತ ಆಗುವ ಸ್ಥಳದಲ್ಲಿ ನೋಡಿದರೆ ಕಾಣಬಹುದು.
ಈ ಬಾರಿ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಯಾವುದೇ ವಿಶೇಷ ಸಿದ್ಧತೆ ಮಾಡಿಲ್ಲ. ಲೇ ಲಡಾಕ್ ವೀಕ್ಷಣಾಲಯದಿಂದ ನೇರ ಪ್ರಸಾರ ಮಾಡ್ತಾ ಇದ್ದೀವಿ. ಯೂಟ್ಯೂಬ್ ಮೂಲಕ ಇದನ್ನು ನೋಡಬಹುದು ಎಂದು ಆನಂದ್ ತಿಳಿಸಿದರು.
ರಾಜ್ಯದಲ್ಲಿ ಗ್ರಹಣ ಗೋಚರ ಸಮಯ:
ಬೆಂಗಳೂರು - ಸಂಜೆ 5.12 ರಿಂದ 5.49
ಮೈಸೂರು - ಸಂಜೆ 5.13 ರಿಂದ 5.51
ಧಾರವಾಡ - ಸಂಜೆ 5.01 ರಿಂದ 5.47