ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗೆ ಬೇಸತ್ತ ಸಾಫ್ಟ್‌ವೇರ್ ಎಂಜಿನಿಯರ್ ವಿಚಿತ್ರ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಜಂಕ್ಷನ್ನಲ್ಲಿ ನಡೆದಿದೆ. ಮುಖಕ್ಕೆ ಕವರ್ ಹಾಕಿಕೊಂಡು, ತನ್ನದೇ ಕಾರಿನಲ್ಲಿ ವಿಜಯ್ ಕುಮಾರ್ (51) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಯಿಲೆ ಬಗ್ಗೆ ತಿಳಿದಷ್ಟೂ ಖಿನ್ನತೆ:ನಗರದ ಪ್ರತಿಷ್ಠಿತ ಕಂಪನಿಯಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಹೃದಯ ಸಂಬಂಧಿ ವ್ಯಾಧಿಯಿಂದ ಬಳಲುತ್ತಿದ್ದರು. ತನಗಿರುವ ಕಾಯಿಲೆ, ಅದರ ಪರಿಣಾಮಗಳ ಬಗ್ಗೆ ಹೆಚ್ಚು ಸರ್ಚ್ ಮಾಡಿ ಮಾಹಿತಿ ಪಡೆದು ಖಿನ್ನತೆಗೆ ಒಳಗಾಗಿದ್ದರು. ಕುರುಬರಹಳ್ಳಿ ಜಂಕ್ಷನ್ ಬಳಿ ಬಂದು ತನ್ನ ಕಾರಿನ ಹಿಂಬದಿ ಸೀಟ್ನಲ್ಲಿ ಕುಳಿತುಕೊಂಡಿದ್ದ. ಬಳಿಕ ದಾರಿಹೋಕನೊಬ್ಬನಿಗೆ ಹಣ, ಕಾರಿನ ಕವರ್ ಕೊಟ್ಟು ತಾನು ಕುಳಿತ ಬಳಿಕ ಕಾರಿನ ಕವರ್ ಹಾಕುವಂತೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.