ಕರ್ನಾಟಕ

karnataka

ETV Bharat / state

ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಕೌಶಲಗಳನ್ನೂ ಕಲಿಸಬೇಕು: ಭಾಸ್ಕರ್ ರಾವ್ ಅಭಿಮತ - Bhaskar rao City police commissioner banglore

ಬೆಂಗಳೂರು ಬಂಟರ ಸಂಘ ಏರ್ಪಡಿಸಿದ್ದ ಸಂಪರ್ಕ - 2019 ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಭಾಗವಹಿಸಿದ್ದರು.

ಬೆಂಗಳೂರು ಬಂಟರ ಸಂಘ ಏರ್ಪಡಿಸಿದ್ದ ಸಂಪರ್ಕ -2019 ಕಾರ್ಯಕ್ರಮ

By

Published : Nov 16, 2019, 11:48 PM IST

ಬೆಂಗಳೂರು: ಶಾಲಾ ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕ ತೆಗೆಯುವುದನ್ನೇ ಸಾಧನೆ ಎಂದು ಹೇಳಿ ಕೊಡಲಾಗ್ತಿದೆ. ಆದರೆ, ವಿದ್ಯಾಭ್ಯಾಸದ ಬಳಿಕ ಉದ್ಯೋಗ ಪಡೆದುಕೊಳ್ಳಬೇಕಾದ ಸಮಾಜ ಎದುರಿಸಬೇಕಾದ ಸಾಮಾಜಿಕ ಕೌಶಲ್ಯವನ್ನೂ ಕಲಿಸಬೇಕು ಎಂದು ಬೆಂಗಳೂರು ಬಂಟರ ಸಂಘ ಏರ್ಪಡಿಸಿದ್ದ ಸಂಪರ್ಕ -2019 ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್​​​ರಾವ್, ನಮ್ಮಲ್ಲಿ ಜನರ ಕೊರತೆ ಇಲ್ಲ. ಆದ್ರೆ ಮಾನವ ಸಂಪನ್ಮೂಲದ ಕೊರತೆ ಇದೆ ಎಂದರು. ಪಠ್ಯ ವಿಷಯಗಳಲ್ಲಿ ಶೇ.95ರಷ್ಟು ಅಂಕ ಪಡೆದು ಸರಿಯಾದ ಉದ್ಯೋಗ ಸಿಗದಿದ್ದಾಗ ಬಹಳಷ್ಟು ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತವೆ ಎಂದರು.

ಬೆಂಗಳೂರು ಬಂಟರ ಸಂಘದ ಸಂಪರ್ಕ 2019ರ ಕಾರ್ಯಕ್ರಮದ ಮೂಲಕ ಮಾನವ ಸಂಪನ್ಮೂಲ ಕ್ರೋಢಿಕರಿಸಿ ಬಲವರ್ಧನೆ ಮಾಡುವುದರ ಜೊತೆಗೆ ಸಮುದಾಯದ ಕಿರಿಯರಿಗೆ ಉದ್ಯೋಗ ಅವಕಾಶಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಆಭಿಪ್ರಾಯಪಟ್ಟರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲುಮೇನ್ಸ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಸಿ. ಶೆಟ್ಟಿ ಭಾಗವಹಿಸಿದ್ದರು.

For All Latest Updates

TAGGED:

ABOUT THE AUTHOR

...view details