ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಷ್ಟ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರಿನ ಕಿದ್ವಾಯಿ, ನಿಮ್ಹಾನ್ಸ್ನಲ್ಲಿ ಸಾಮಾಜಿಕ ಅಂತರ ಕಷ್ಟ..?
ಕಿದ್ವಾಯಿ ಆಸ್ಪತ್ರೆಗೆ ಕೇವಲ ಬೆಂಗಳೂರಿಗರು ಮಾತ್ರವಲ್ಲದೇ, ರಾಜ್ಯ- ಅಂತರ್ ರಾಜ್ಯದಿಂದ ನಿತ್ಯ 600-700 ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಹಾಗಾಗಿ ಸಾಮಾಜಿಕ ಅಂತರ ಕಷ್ಟವಾಗಿದೆ.
ಕಿದ್ವಾಯಿ ಆಸ್ಪತ್ರೆಗೆ ಕೇವಲ ಬೆಂಗಳೂರಿಗರು ಮಾತ್ರವಲ್ಲದೇ, ರಾಜ್ಯ- ಅಂತರ್ ರಾಜ್ಯದಿಂದ ನಿತ್ಯ 600-700 ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಹಾಗಾಗಿ ಸಾಮಾಜಿಕ ಅಂತರ ಕಷ್ಟವಾಗಿದೆ. ಆದರೆ ಬರುವ ಪ್ರತಿ ರೋಗಿಗಳಿಗೆ ಚಿಕಿತ್ಸೆ ಮುನ್ನ ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ನಿಮ್ಹಾನ್ಸ್ನಲ್ಲೂ ಜೂ.1 ರಿಂದ ಒಪಿಡಿ ಸೇವೆಯನ್ನ ಆರಂಭಿಸಿದೆ. ಆದರೆ ಅಪಾಯಿಂಟ್‌ಮೆಂಟ್ ಇದ್ದವರಿಗಷ್ಟೇ ಸೇವೆ ನೀಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ರೀತಿಯಲ್ಲಿ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಆದರೆ ದಿನೇ ದಿನೆ ಅಪಾಯಿಂಟ್‌ಮೆಂಟ್ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆಯಿಂದ ಪ್ರತಿಕ್ರಿಯೆ ನಿಧಾನಗತಿಯಲ್ಲಿ ಇರಲಿದ್ದು ಸಹಕರಿಸುವಂತೆ ಸೂಚಿಸಿದೆ. ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಅಗತ್ಯವಿದ್ದು, ಯಾರು ಆಸ್ಪತ್ರೆಯತ್ತ ಗುಂಪು ಗುಂಪಾಗಿ ಬರದಂತೆ ಮನವಿ ಮಾಡಿದ್ದಾರೆ.