ಕರ್ನಾಟಕ

karnataka

ETV Bharat / state

ಗ್ರಾಮ ಸೇವಾ ಸಂಘ ಸದಸ್ಯರಿಂದ ಉಪವಾಸ ಸತ್ಯಾಗ್ರಹ:  ಹಿರೇಮಠ್ ಚಾಲನೆ - ಸಾಮಾಜಿಕ ಹೋರಾಟಗಾರ

ಪವಿತ್ರ ಆರ್ಥಿಕತೆ, ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧಿ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಉಪವಾಸ ಸತ್ಯಾಗ್ರಹ

By

Published : Oct 3, 2019, 2:02 PM IST

ಬೆಂಗಳೂರು:ಪವಿತ್ರ ಆರ್ಥಿಕತೆ, ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧಿ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಗಾಂಧೀಜಿ ಸಂದೇಶದ ಗ್ರಾಮ ರಾಜ್ಯದ ಕನಸು ನನಸು ಮಾಡುವ ಉದ್ಯೋಗಗಳು ಸೃಷ್ಟಿಯಾಗಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದ ಸದಸ್ಯರು ಗಾಂಧೀ ಭವನದ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಗ್ರಾಮ ಸೇವಾ ಸಂಘದ, ರಂಗಕರ್ಮಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಸನ್ನ ಅವರು ಮಾತನಾಡಿ, 26 ರಿಂದಲೇ ಸತ್ಯಾಗ್ರಹ ಆರಂಭವಾಗಿದೆ. ಇಂದಿನಿಂದ ಯುವಕರು ಮೂರು ದಿನಗಳ ಕಾಲ ನಿರಂತರ ಉಪವಾಸ ನಡೆಸಲಿದ್ದಾರೆ ಎಂದರು

ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್ ಆರ್ ಹಿರೇಮಠ್, ಸ್ವಾತಂತ್ರ್ಯ, ಸಮಾನತೆಗಾಗಿ ಗಾಂಧೀಜಿಯವರು ಸತ್ಯಾಗ್ರಹವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದರು. ಗಾಂಧೀಜಿ ಹೇಳಿದ ಹಾಗೆ, ಶಾಂತಿ, ಅಹಿಂಸೆಯಿಂದ ಜೀವನ ಮಾಡಿದರು. ಹಾಗೆಯೇ ನಮ್ಮ ಪವಿತ್ರ ಆರ್ಥಿಕತೆಯ ಉದ್ದೇಶ ಈಡೇರಿಕೆಗೆ ಸತ್ಯಾಗ್ರಹದ ಜೊತೆ ನಾನೂ ಕೈಜೋಡಿಸಿದ್ದೇನೆ ಎಂದರು.

ABOUT THE AUTHOR

...view details