ಬೆಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗಳಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತಿವೆ. ಜೂನ್ ಹಾಗೂ ಜುಲೈ ತಿಂಗಳು ಹಾವುಗಳ ಸಂತಾನೋತ್ಪತ್ತಿ ಸಮಯ ಆಗಿರುವುದರಿಂದ ಮೊಟ್ಟೆಯೊಡೆದು ಮರಿಗಳು ಹೊರಬರುತ್ತಿವೆ. ಈ ಸಮಯದಲ್ಲಿ ಮಳೆ, ಚಳಿ ಇದ್ದು ಬೆಚ್ಚಗಿನ ಜಾಗ ಹುಡುಕಿಕೊಂಡು ಅವುಗಳು ಸಂಚಾರ ನಡೆಸುತ್ತವೆ. ಹಾಗಾಗಿ, ಮನೆಯಲ್ಲಿರುವ ಎಲ್ಲ ಜಾಗಗಳನ್ನೂ ಪ್ರತಿದಿನ ಶುಚಿಯಾಗಿಡುವಂತೆ ಪಾಲಿಕೆ ಮನವಿ ಮಾಡಿದೆ.
ಕಬ್ಬನ್ ಪಾರ್ಕ್‌ನಲ್ಲಿ ವಿಷಕಾರಿ ಹಾವು ಸೆರೆ:ಕಬ್ಬನ್ ಪಾರ್ಕ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕಣ್ಣಿಗೆ ನಿತ್ಯವೂ ವಿಷಕಾರಿ ಹಾವಿನ ದರ್ಶನ ಆಗುತ್ತಿತ್ತು. ಆರಡಿಗೂ ಅಧಿಕ ಉದ್ದ ಇದ್ದ ಉರಗ ಕಂಡು ಇಲ್ಲಿನ ಕೂಲಿ ಕಾರ್ಮಿಕರು ಭೀತಿಗೊಳಗಾಗಿದ್ದರು. ಪಾಲಿಕೆಯ ಅನಿಮಲ್ ರೆಸ್ಕ್ಯೂ ಟೀಂ ಹಾವನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದೆ. ಪಾರ್ಕ್‌ನಲ್ಲಿ ಇನ್ನಷ್ಟು ಹಾವುಗಳ ಓಡಾಟವಿದ್ದು ವಾಕಿಂಗ್, ಜಾಗಿಂಗ್ ಎಂದು ಕಬ್ಬನ್ ಪಾರ್ಕ್ಗೆ ಹೋಗುವ ಜನರು ಎಚ್ಚರದಿಂದಿರುವುದು ಸೂಕ್ತ ಎಂದು ಉರಗ ತಜ್ಞ ಮೋಹನ್ ಹೇಳಿದರು.