ಬೆಂಗಳೂರು: ಮಂಡ್ಯದಿಂದ ತಮಿಳುನಾಡಿಗೆ ರಕ್ತಚಂದನ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ಧರಾಜು, ಪ್ರಜ್ವಲ್, ಲೋಕೇಶ್, ದೇವರಾಜ್ ಹಾಗೂ ಗೋವಿಂದಸ್ವಾಮಿ ಎಂದು ಗುರುತಿಸಲಾಗಿದೆ.
ಮಂಡ್ಯದ ದೇವಲಾಪುರದ ಕಾಡುಗಳಿಂದ ರಕ್ತಚಂದನ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ತಮಿಳುನಾಡಿಗೆ ಸಾಗಿಸುವ ಯತ್ನದಲ್ಲಿದ್ದರು. ಮಾರ್ಗಮಧ್ಯೆ ಪೊಲೀಸರ ಕಣ್ತಪ್ಪಿಸಲು ಬೊಲೇರೋ ವಾಹನದಲ್ಲಿ ರಕ್ತಚಂದನ ಮರದ ದಿಮ್ಮಿಗಳನ್ನು ಇರಿಸಿ ಅವುಗಳ ಮೇಲೆ ಟೊಮೆಟೊ ಬಾಕ್ಸ್ ಇಟ್ಟು ಸಾಗಿಸುತ್ತಿದ್ದಾಗ ಮಹಾಲಕ್ಷ್ಮಿ ಲೇಔಟ್ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.