ಕರ್ನಾಟಕ

karnataka

ETV Bharat / state

ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಸಾಗಾಟ: ಕಂದಾಯ ಗುಪ್ತಚಾರ ನಿರ್ದೇಶನಾಲಯ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ - ಕಂದಾಯ ಗುಪ್ತಚಾರ ನಿರ್ದೇಶನಾಲಯ

ರೋಡಿಯಂ ಲೇಪಿತ ಚಿನ್ನ ಕಳ್ಳ ಸಾಗಾಟ ಯತ್ನ ನಡೆಸಿದ ಪ್ರಯಾಣಿಕನೊಬ್ಬ ಕಂದಾಯ ಗುಪ್ತಚಾರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಕ್ಕಿಬಿದ್ದಾನೆ. ಬಂಧಿತನಿಂದ 30 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

Smuggle gold with rhodium coating
ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಸಾಗಾಟ

By

Published : Aug 29, 2022, 9:11 AM IST

ದೇವನಹಳ್ಳಿ(ಬೆಂಗಳೂರು):ಚಿನ್ನದ ತಂತಿಗೆ ರೋಡಿಯಂ ಲೇಪಿಸಿ ಚಿನ್ನ ಕಳ್ಳ ಸಾಗಾಟ ಯತ್ನ ನಡೆಸಿದ ಪ್ರಯಾಣಿಕ ಕಂದಾಯ ಗುಪ್ತಚಾರ ನಿರ್ದೇಶನಾಲಯದ(DRI) ಅಧಿಕಾರಿಗಳಿಗೆ ಸಿಕ್ಕಿಬಿದ್ದಾನೆ. ಆ. 27 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಮೇಲೆ ಸಂಶಯ ವ್ಯಕ್ತವಾದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.

ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಸಾಗಾಟ

ತಪಾಸಣೆ ವೇಳೆ ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಕಳ್ಳ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಟ್ರಾಲಿ ಬ್ಯಾಗ್​​ನಲ್ಲಿ ಮರೆಮಾಚಿ ಚಿನ್ನ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ 30,60,750 ಮೌಲ್ಯದ 583 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:ಚಿನ್ನದ ತಂತಿಗೆ ರೋಡಿಯಂ ಲೇಪಿಸಿ ಅಕ್ರಮ ಸಾಗಾಟ: ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮ

ABOUT THE AUTHOR

...view details