ಬೆಂಗಳೂರು:ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಕೇಶ್ ಹಲ್ಲೆಗೊಳಗಾದ ಯುವಕ. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಾಯಾಳು ರಾಕೇಶ್, ಕಳೆದ ಆಗಸ್ಟ್ 24ರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ. ಈ ವೇಳೆ ಚೋಳರಪಾಳ್ಯ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ರಾಕೇಶ್ನನ್ನು ನೋಡಿ ಏನೋ ನನ್ನ ನೋಡಿ ಹಾಗೇ ಹೋಗ್ತಿದ್ಯಾ... ಬಾರೋ ಇಲ್ಲಿ ಎಂದಿದ್ದಾನೆ.