ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸದಾಶಿನಗರದ ಮನೆಯಲ್ಲಿ ಎಸ್.ಎಂ. ಕೃಷ್ಣ ಭೇಟಿ ಮಾಡಿದ್ದು ಸುದೀರ್ಘ ಸಮಾಲೋಚನೆ ನಡೆಸಿದ್ರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಉಪಸ್ಥಿತರಿದ್ದರು.

ತಿಹಾರ್ ಜೈಲಿನಿಂದ ಡಿಕೆಶಿ ಹೊರಬಂದ ನಂತರದ ದಿನಗಳಲ್ಲಿ ಅನೇಕ ನಾಯಕರು ಅವರ ನಿವಾಸಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆದರೆ ಇದುವರೆಗೂ ಎಸ್.ಎಂ. ಕೃಷ್ಣ ಮಾತ್ರ ಆಗಮಿಸಿರಲಿಲ್ಲ. ಸದಾಶಿವನಗರದಲ್ಲಿ ಇಬ್ಬರೂ ನಾಯಕರ ನಿವಾಸಗಳಿದ್ದರೂ ಭೇಟಿಗೆ ಅವಕಾಶ ಕೂಡಿ ಬಂದಿರಲಿಲ್ಲ. ಇಂದು ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಿರುವ ಡಿಕೆಶಿ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಈ ಸಂದರ್ಭ ಎಸ್.ಎಂ. ಕೃಷ್ಣ ಭೇಟಿ ನೀಡಿ ಚರ್ಚೆ ನಡೆಸಿದರು.
ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಕಣ್ಮರೆಯಾದ ಸಂದರ್ಭದಿಂದ ಡಿ.ಕೆ. ಶಿವಕುಮಾರ್ ಮನೆ ಮಗನಂತೆ ಓಡಾಡಿದ್ದರು. ಸಿದ್ದಾರ್ಥ್ ಮೃತದೇಹ ಬೆಂಗಳೂರು ತಲುಪುವವರೆಗೂ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಜೊತೆಗಿದ್ದರು. ಈ ಕಾರ್ಯವನ್ನು ಇಂದು ಎಸ್.ಎಂ. ಕೃಷ್ಣ ನೆನಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.