ಕರ್ನಾಟಕ

karnataka

ETV Bharat / state

ರಾಕಿಂಗ್​ ಸ್ಟಾರ್​ನ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ! - Slum Bharat murder attempted on rocking star Yash,

ಉತ್ತರ ಪ್ರದೇಶದಲ್ಲಿ ಸೆರೆಯಾಗಿದ್ದ ರೌಡಿಶೀಟರ್ ಸ್ಲಂ ಭರತ್ ಪೊಲೀಸರು ನಡೆಸಿದ ಶೂಟೌಟ್​ನಲ್ಲಿ ಬಲಿಯಾಗಿರುವುದು ಗೊತ್ತಿರುವ ಸಂಗತಿ. ಆದ್ರೆ ಈ ಸ್ಲಂ ಭರತ್​ ರಾಕಿಂಗ್​ ಸ್ಟಾರ್​ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ವಿಚಾರ ತಿಳಿದು ಬಂದಿದೆ.

murder attempted on rocking star Yash, Slum Bharat murder attempted on rocking star Yash, Slum Bharat murder attempted on rocking star Yash news, ರಾಕಿಂಗ್​ ಸ್ಟಾರ್​ನ ಹತ್ಯೆಗೂ ಸಂಚು, ರಾಕಿಂಗ್​ ಸ್ಟಾರ್​ನ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ್, ರಾಕಿಂಗ್​ ಸ್ಟಾರ್​ನ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ ಸಾವು,
ರಾಕಿಂಗ್​ ಸ್ಟಾರ್​ನ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ ಮಟಾಷ್

By

Published : Feb 27, 2020, 12:17 PM IST

Updated : Feb 27, 2020, 12:46 PM IST

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್ ನಟನ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿ ಕೊನೆಗೂ ಮಟಾಷ್ ಆಗಿದ್ದಾನೆ. ರಾಜಗೋಪಾಲನಗರ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಸ್ಲಂ ಭರತ್​ ಸ್ಟಾರ್ ನಟ ಯಶ್ ಹತ್ಯೆಗೂ ಸ್ಕೆಚ್ ಹಾಕಿದ್ದ. ಆದರೆ ಈ ವಿಚಾರ ತಿಳಿದು ಸಿಸಿಬಿ ಪೊಲೀಸರು ಸ್ಲಂ ಭರತ್‌ನನ್ನ ಈ ಹಿಂದೆೆಯೇ ಬಂಧಿಸಿದ್ದರು. ಆದರೆ ಜೈಲಿನಿಂದ ಹೊರ ಬಂದವನು ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿ ಇದೀಗ ಪೊಲೀಸರ ಗುಂಡೇಟಿಗೆ ಹೆಣವಾಗಿದ್ದಾನೆ.

ಏನಿದು ಯಶ್ ಹತ್ಯೆ ಪ್ಲಾನ್?

ಕಳೆದ ವರ್ಷ ಮಾರ್ಚ್ 7ರಂದು ಶೇಷಾದ್ರಿಪುರಂನ ಬಿಡಿಎ ಕಚೇರಿ ಬಳಿ ಸ್ಲಂ ಭರತ್​ ಸಹಚರರಾದ ನಿತೇಶ್, ನಿತ್ಯಾನಂದ, ಮಧು, ಪೃಥ್ವಿ ಎಂಬುವವರು ಸ್ಟಾರ್ ನಟನ ಹತ್ಯೆಗೆ ರೆಡಿಯಾಗಿದ್ದರು. ಈ ವಿಚಾರ ತಿಳಿದು ಸಿಸಿಬಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ್ದರು.

ನಟನೊಬ್ಬನ ಹತ್ಯೆ ಮಾಡಲು ಬಂದಿದ್ವಿ. ಸ್ಲಂ ಭರತ್​ ಕಡೆಯಿಂದ ನಮಗೆ ಆದೇಶ ಬಂದಿದ್ದು ಅಷ್ಟೇ ಗೊತ್ತು. ನಾನ್ ಕಾಲ್ ಮಾಡುವಷ್ಟರಲ್ಲಿ ಬಿಡಿಎ ಕಚೇರಿ ಬಳಿ ರೆಡಿಯಾಗಿರಿ ಅಂತ ಭರತ್​ ಹೇಳಿದ್ದ. ಭರತ್​ನ ಮಾತಿನಂತೆ‌ ನಾವೆಲ್ಲರೂ ಮಾರಕಾಸ್ತ್ರಗಳೊಂದಿಗೆ ಕಾದು ಕುಳಿತಿದ್ವಿ ಎಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಸಿಸಿಬಿ ಪೊಲೀಸರು ಭರತ್​ನನ್ನು ವಿಚಾರಣೆಗೊಳಪಡಿಸಿ ಜೈಲಿಗಟ್ಟಿದ್ರು. ನಂತ್ರ ಮತ್ತೆ ಜಾಮೀನು ಮೇಲೆ ಹೊರ ಬಂದ ಸ್ಲಂ ಭರತ್​ ಸದ್ಯ ಹೆಣವಾಗಿದ್ದಾನೆ.

Last Updated : Feb 27, 2020, 12:46 PM IST

ABOUT THE AUTHOR

...view details