ಬೆಂಗಳೂರು :ನಗರದಲ್ಲಿ ಕೋವಿಡ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು, 6 ತಿಂಗಳಹಸುಗೂಸು ಸೋಂಕಿನಿಂದ ಸಾವನ್ನಪ್ಪಿದೆ.
ಅಯ್ಯೋ ದುರ್ವಿಧಿಯೇ.. ಬೆಂಗಳೂರಲ್ಲಿ ಮಹಾಮಾರಿ ಕೋವಿಡ್ಗೆ 6 ತಿಂಗಳ ಹಸುಗೂಸು ಬಲಿ - ಬೆಂಗಳೂರು ಕೊರೊನಾ ಅಪ್ಡೇಟ್
ಕೊರೊನಾ ಎರಡನೇ ಅಲೆ ಮಕ್ಕಳು ದೊಡ್ಡವರು ಎನ್ನದೆ ಎಲ್ಲರನ್ನೂ ಬಲಿಪಡೆಯುತ್ತಿದ್ದು, ಬೆಂಗಳೂರಲ್ಲಿ 6 ತಿಂಗಳ ಕಂದಮ್ಮವೊಂದು ಸೋಂಕಿಗೆ ಬಲಿಯಾಗಿದೆ.

ಬೆಂಗಳೂರಿನಲ್ಲಿ ಕೋವಿಡ್ಗೆ 6 ತಿಂಗಳ ಹಸುಗೂಸು ಬಲಿ
ವಿಷಮ ಶೀತ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಏಪ್ರಿಲ್ 15 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಂದೇ ಕೊನೆಯುಸಿರೆಳೆದಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾದ ಜನರು ನಿರ್ಲಕ್ಷ್ಯ ವಹಿಸುತ್ತಿದ್ದು ಗುಂಪು ಸೇರುವುದು , ಮಾಸ್ಕ್ ಧರಿಸದೇ ಓಡಾಡುವುದು ಕಂಡುಬರುತ್ತಿದೆ. ನಿರ್ಲಕ್ಷ್ಯದಿಂದಾಗಿ ರಾಜಧಾನಿಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿವೆ.