ಕರ್ನಾಟಕ

karnataka

ETV Bharat / state

ಆರು ಮಂದಿ ಐಎಎಸ್, ಓರ್ವ ಐಎಫ್​​ಎಸ್ ಅಧಿಕಾರಿಯ ವರ್ಗಾವಣೆ - State government order

ಆರು ಮಂದಿ ಐಎಎಸ್​​ ಮತ್ತು ಓರ್ವ ಐಎಫ್​ಎಸ್​​ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶ
ರಾಜ್ಯ ಸರ್ಕಾರದ ಆದೇಶ

By

Published : Jun 18, 2020, 9:18 PM IST

ಬೆಂಗಳೂರು: ಆರು ಮಂದಿ ಐಎಎಸ್ ಮತ್ತು ಒಬ್ಬರು ಐಎಫ್‌ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಡಾ. ಎನ್.ನಾಗಾಂಬಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಶೇಷ ಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕ ಇಲಾಖೆ. ತುಷಾರ್ ಗಿರಿನಾಥ್ - ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ. ಹರ್ಷ ಗುಪ್ತಾ- ಆಯುಕ್ತರು, ಸಮೀಕ್ಷೆ ಮತ್ತು ಭೂ ದಾಖಲೆ ಇಲಾಖೆ. ಇದರ ಜೊತೆಗೆ ಹರ್ಷಗುಪ್ತಾ ಅವರಿಗೆ ಹೆಚ್ಚುವರಿಯಾಗಿ ಐಎಂಎ ಪ್ರಕರಣದ ವಿಶೇಷ ಅಧಿಕಾರಿಯಾಗಿ ಹೊಣೆ ನೀಡಲಾಗಿದೆ. ಎನ್. ಜಯರಾಂ- ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.

ಹೆಚ್.ಬಸವರಾಜೇಂದ್ರ- ಆಯುಕ್ತರು, ಪಶುಸಂಗೋಪನಾ ಇಲಾಖೆ. ಡಾ. ಎನ್.ಶಿವಶಂಕರ್ - ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕೆಐಎಡಿಬಿ. ಇದರ ಜೊತೆಗೆ ಶಿವಶಂಕರ್ ಅವರಿಗೆ ಹೆಚ್ಚುವರಿಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಜವಾಬ್ದಾರಿ ವಹಿಸಲಾಗಿದೆ. ಐಎಫ್‌ಎಸ್ - ಎಸ್.ಆರ್.ನಟೇಶ್ ಅವರನ್ನು ಆನೆ ಯೋಜನೆ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details