ಕರ್ನಾಟಕ

karnataka

ETV Bharat / state

ತಮಿಳುನಾಡಿಗೆ ಹೋಗಿ ಬಂದವರಲ್ಲಿ ಕೊರೊನಾ: ಬೆಂಗಳೂರಿನಲ್ಲಿ ಆರು ಪಾಸಿಟಿವ್ ..! - Six Corona Positives in Bangalore

ಅಂತ್ಯಕ್ರಿಯೆಗಾಗಿ ತಮಿಳುನಾಡಿಗೆ ಹೋಗಿ ಬೆಂಗಳೂರಿಗೆ ವಾಪಸಾದ ತಂದೆ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಂದು ಸಿಲಿಕಾನ್ ಸಿಟಿಯಲ್ಲಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿವೆ.

Corona Positives
ಕೊರೊನಾ ಪಾಸಿಟಿವ್

By

Published : May 27, 2020, 2:44 PM IST

ಬೆಂಗಳೂರು: ಸಂಬಂಧಿಕರ ಅಂತ್ಯಕ್ರಿಯೆಗಾಗಿ ತಮಿಳುನಾಡಿಗೆ ಹೋಗಿ ಬೆಂಗಳೂರಿಗೆ ವಾಪಸಾದ ತಂದೆ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. P -2,334, 60 ವರ್ಷದ ವ್ಯಕ್ತಿ ಹಾಗೂ, P - 2,336 , 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆ.

ಇನ್ನು ಹೆಬ್ಬಗೋಡಿಯ 57 ವರ್ಷದ(P- 2,333) ಎಎಸ್​​​ಐಗೂ ಕೊರೊನಾ ಬಂದಿದ್ದು, ಮೇಲ್ನೋಟಕ್ಕೆ P - 1,396 ಸೋಂಕಿತನ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಆದರೆ ಎಎಸ್​​​​ಐ ಹದಿನೈದು ದಿನ ರಜೆಯಲ್ಲಿದ್ದು, ಬೆಂಗಳೂರು ನಗರಕ್ಕೆ ಬಂದು ವಾಪಾಸ್ಸಾದಾಗ ಕೊರೊನಾ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಉಳಿದ ಮೂವರು ಅಂತರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಲ್ಲೂ ಕೊರೊನಾ ಬಂದಿದೆ.

P - 2,335, 25 ವರ್ಷದ ಮಹಿಳೆ - ಮಧ್ಯಪ್ರದೇಶದಿಂದ ವಾಪಾಸ್ಸಾದವರು

P- 2,387, 22 ವರ್ಷದ ಮಹಿಳೆ - ನೇಪಾಳದಿಂದ ಪ್ರಯಾಣ

P- 2,388, 28 ವರ್ಷದ ಮಹಿಳೆ - ದುಬೈನಿಂದ ಪ್ರಯಾಣ, ಆದರೆ ಇವರಿಗೆ ಬೆಂಗಳೂರಿನ ಲೋಕಲ್ ವಿಳಾಸ ಇಲ್ಲ. ಇವರು ಪ್ರಯಾಣ ಮಾಡಿ ಬಂದಿದ್ದು, ಹೋಟೆಲ್ ಕ್ವಾರಂಟೈನ್​​​​ನಲ್ಲಿ ಇಡಲಾಗಿತ್ತು ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details