ಬೆಂಗಳೂರು:ಇತ್ತೀಚೆಗೆ ಆನೆ ದಂತಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ 6 ಜನ ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ.
ಕಲಾತ್ಮಕವಾಗಿ ಕೆತ್ತಿದ ಆನೆ ದಂತಗಳನ್ನು ಮಾರುತ್ತಿದ್ದ ಆರೋಪಿಗಳ ಬಂಧನ - Bangalore Forest Trafficker
ಇತ್ತೀಚೆಗೆ ಆನೆ ದಂತಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ 6 ಜನ ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ.
ಕಲಾತ್ಮಕವಾಗಿ ಕೆತ್ತಿದ ಆನೆದಂತಗಳನ್ನು ಮಾರುತ್ತಿದ್ದ ಆರೋಪಿಗಳು ಸೆರೆ
ಸದಾಶಿವ, ನಾಗರಾಜ್, ಮೊಹಮ್ಮದ್ ಅಸ್ಗರ್, ಪ್ರಮೀಳಾ ಕುಮಾರಿ, ಪ್ರಭು, ಪುರುಷೋತ್ತಮ್ ಬಂಧಿತ ಆರೋಪಿಗಳು. ಇವರು ಮರಿಯಪ್ಪನಪಾಳ್ಯದ ಮನೆಯೊಂದರಲ್ಲಿ ಆನೆ ದಂತ ಸಂಗ್ರಹಿಸಿಟ್ಟಿದ್ದು, ಅವುಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡುವುದರಲ್ಲಿ ತೊಡಗಿದ್ದರು.
ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಆನೆ ದಂತಗಳನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.