ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ

ಸಿಡಿಯಲ್ಲಿದ್ದ ಯುವತಿಗೆ ರಮೇಶ್ ಜಾರಕಿಹೊಳಿ ವಿಡಿಯೋ ಕಾಲ್​ ಮಾಡಿದ್ದರು ಎನ್ನುವ ಆರೋಪವಿರುವ ಕಾರಣ ಇದೀಗ ಎಸ್​ಐಟಿ ತಂಡ ಅವರ ಮೊಬೈಲ್​ ವಶಕ್ಕೆ ಪಡೆದುಕೊಂಡಿದೆ.

Ramesh Jarkiholi
Ramesh Jarkiholi

By

Published : Mar 25, 2021, 12:53 AM IST

ಬೆಂಗಳೂರು:ರಾಸಲೀಲೆ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್​ನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ಪಡೆದುಕೊಂಡಿದೆ.

ಸಿಡಿಯಲ್ಲಿನ ಯುವತಿ ಜೊತೆ ರಮೇಶ್ ಜಾರಕಿಹೊಳಿ ವಿಡಿಯೋ ಕಾಲ್ ಮಾಡಿದ್ದ ಆರೋಪದಡಿ‌ ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡು ಪರಿಶೀಲಿಸಿ ರಿಟ್ರೈವ್ ಮಾಡಲು ಎಫ್ಎಸ್ಎಲ್ ಕಳುಹಿಸಲಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳು ತಿಳಿಸಿವೆ. ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕರೆಯಿಸಿ ಎಸ್ಐಟಿ ವಿಚಾರಣೆ ನಡೆಸಿತ್ತು. ಆದರೆ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಅಸಮರ್ಪಕವಾಗಿ ಉತ್ತರಿಸಿದ್ದರು ಎಂದು ತಿಳಿದು ಬಂದಿದೆ‌. ನಕಲಿ ಸಿಡಿ ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು‌.‌ ಸದ್ಯ ಯುವತಿಗೆ ವಿಡಿಯೋ ಕಾಲ್ ಮಾಡಿದ ಆರೋಪದಡಿ ಮಾಜಿ ಸಚಿವರ ಮೊಬೈಲ್ ವಶಕ್ಕೆ‌ ಪಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸುಳ್ಳು ಜಾಹೀರಾತು ನಂಬಿ 1.13 ಲಕ್ಷ ರೂ. ಕಳೆದುಕೊಂಡ ಯುವಕ; ನೀವು ಮೋಸ ಹೋಗಿರಿ ಜೋಕೆ!

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆಸುತ್ತಿದೆ.

ABOUT THE AUTHOR

...view details