ಬೆಂಗಳೂರು:ನಕಲಿ ಛಾಪಾ ಕಾಗದ(fake stamp paper) ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಿಶೇಷ ತನಿಖಾ ತಂಡ (SIT) ತಂಡವು ಬಂಧಿಸಿದೆ.
ನಕಲಿ ಛಾಪಾ ಕಾಗದ(fake stamp paper case) ಸಂಬಂಧ ಹೈಕೋರ್ಟ್(high court) ಸೂಚನೆ ಮೇರೆಗೆ ಈ ಎಸ್ಐಟಿ ತಂಡವು ರಚನೆಯಾಗಿತ್ತು. ಹುಸೇನ್ ಮೋದಿ ಬಾಬು, ಸೀಮಾ, ನಯಾಜ್ ಅಹ್ಮದ್,ಶಬ್ಬೀರ್ ಆಹ್ಮದ್ ಹಾಗೂ ಹರೀಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 63 ಲಕ್ಷ ರೂ. ಮೌಲ್ಯದ ನಕಲಿ ಚಾಪಾ ಕಾಗದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು 2 ರೂ.ಯಿಂದ 25 ಸಾವಿರ ರೂ. ಮೌಲ್ಯದ ಛಾಪಾ ಕಾಗದದವರೆಗೂ ನಕಲಿ ಮಾಡುತ್ತಿದ್ದರು. ನಕಲಿ ಫಾಂಟ್, ಸೀಲ್ ಹಾಗೂ ಸ್ಕ್ರೀನ್ ಪ್ರಿಂಟಿಂಗ್ ಬಳಸಿ ಛಾಪಾ ಕಾಗದ ಸೃಷ್ಟಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಮೈಸೂರು ಮಹಾರಾಜರ ಕಾಲದ ರೀತಿಯ ಛಾಪಾ ಕಾಗದಗಳನ್ನೂ(fake stamp paper) ಕೂಡ ಸೃಷ್ಟಿ ಮಾಡುತ್ತಿದ್ದರು. ಹಳೆಯ ಆಸ್ತಿಗಳನ್ನು ಕಬಳಿಸುವ ಉದ್ದೇಶದಿಂದ ಇಂತಹ ನಕಲಿ ಛಾಪಾ ಕಾಗದ ಸೃಷ್ಟಿಯಾಗುತ್ತಿತ್ತು. ಇದೇ ರೀತಿಯ ಹಳೆಯ ಸ್ಟಾಂಪ್ ಪೇಪರ್, ಹೊಸ ಪೇಪರ್ಗಳನ್ನೂ ಕೂಡ ಎಸ್ಐಟಿ(Special Investigation Team) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ:ಆಟೋದಲ್ಲಿ 2 ತಲ್ವಾರ್ ಪತ್ತೆ: ಓರ್ವನ ಬಂಧನ, ಮೂವರು ಪರಾರಿ