ಬೆಂಗಳೂರು:ಅಶ್ಲೀಲಸಿಡಿ ಬಹಿರಂಗ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ಸ್ಥಳ ಮಹಜರಿಗಾಗಿ ಯುವತಿಯನ್ನು ಎಸ್‌ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಸಿಡಿ ತನಿಖೆ: ಮಲ್ಲೇಶ್ವರಂನ ಅಪಾರ್ಟ್ಮೆಂಟ್ನಲ್ಲಿ ಎಸ್ಐಟಿಯಿಂದ ಮಹಜರು - ಎಸಿಪಿ ಕವಿತಾ
ಸಿಡಿ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಸ್ಥಳ ಮಹಜರಿಗಾಗಿ ಕರೆದೊಯ್ದಿದೆ. ಇದಕ್ಕೂ ಮೊದಲು ಯುವತಿ ಉಳಿದುಕೊಂಡಿದ್ದ ಆರ್.ಟಿ.ನಗರದಲ್ಲಿರುವ ನಿವಾಸದಲ್ಲಿ ತನಿಖಾಧಿಕಾರಿಗಳು ಸ್ಥಳ ಮಹಜರು ಮಾಡಿದರು.
ಎಸ್ಐಟಿಯಿಂದ ಮಹಜರು
ಎಸಿಪಿ ಕವಿತಾ ನೇತೃತ್ವದಲ್ಲಿ ಮಹಜರು ನಡೆಯುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದಲ್ಲಿರೋ ಫ್ಲಾಟ್ನಲ್ಲಿ ತನಿಖೆ ನಡೆಯುತ್ತಿದೆ. ಈ ಫ್ಲಾಟ್ನ ಬೆಲೆ ಸುಮಾರು 3 ಕೋಟಿ 60 ಲಕ್ಷ ಎನ್ನಲಾಗುತ್ತದೆ. ಇದಕ್ಕೂ ಮೊದಲು ಯುವತಿ ಉಳಿದುಕೊಂಡಿದ್ದ ಆರ್.ಟಿ. ನಗರದಲ್ಲಿರುವ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ.
ಇದನ್ನೂ ಓದಿ:ಸಿಡಿ ಪ್ರಕರಣ: ಯುವತಿ ಮಹಜರಿಗೆ ಒಳಪಡಿಸಿದ ಎಸ್ಐಟಿ
Last Updated : Apr 1, 2021, 3:38 PM IST