ಬೆಂಗಳೂರು : ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿ ನರೇಶ್ ಹಾಗೂ ಆತನ ಆಪ್ತ ಅರುಣ್ ಮನೆ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿದೆ.
ಸಿಡಿ ಪ್ರಕರಣದ ರೂವಾರಿಗಳಾದ ನರೇಶ್, ಅರುಣ್ ಮನೆ ಮೇಲೆ SIT ದಾಳಿ - ಸಿಡಿ ಪ್ರಕರಣ ಎಸ್ಐಟಿ ತನಿಖೆ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪ್ರಮುಖ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದೆ.

ಸಿಡಿ ಪ್ರಕರಣ ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ
ನರೇಶ್ ನಿವಾಸದಲ್ಲಿ ಎಸ್ಐಟಿ ತಂಡ ಪರಿಶೀಲನೆ ನಡೆಸಿದ್ದು, ನರೇಶ್ ಆಪ್ತನಾಗಿದ್ದ ಅರುಣ್ ನಿವಾಸದಲ್ಲೂ ಪರಿಶೀಲನೆ ನಡೆಯುತ್ತಿದೆ. ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಮಂಜುನಾಥ ನಗರದಲ್ಲಿರುವ ನರೇಶ್ ನಿವಾಸದಲ್ಲಿ ಮಧ್ಯಾಹ್ನದಿಂದ ಜಾಲಾಡುತ್ತಿದೆ. ಲಗ್ಗೆರೆಯಲ್ಲಿರುವ ಅರುಣ್ ನಿವಾಸದಲ್ಲಿಯೂ ಪರಿಶೀಲನೆ ಮುಂದುವರೆದಿದೆ.