ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ : ಎಸ್ಐಟಿ ಖೆಡ್ಡಾಕ್ಕೆ ಬಿದ್ದ ಸೈಯದ್ ಮುಜಾಹಿದ್ - ಮುಜಾಹಿದ್

ಐಎಂಎ ಪ್ರಕರಣದ ಮನ್ಸೂರ್ ಖಾನ್ ಆಪ್ತ ಮುಜಾಹಿದ್ ಮನೆ ಮೇಲೆ ಸಿಸಿಬಿ ಡಿಸಿಪಿ ಗಿರೀಶ್ & ಇಬ್ಬರು ಡಿವೈಎಸ್ಪಿಗಳ ನೇತೃತ್ವದದ ತಂಡ ದಾಳಿ ನಡೆಸಿದೆ. ದಾಳಿ ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಐಎಂಎ ಹಾಗೂ ಮನ್ಸೂರ್ ಖಾನ್ ಜೊತೆ ನಿಕಟ ಸಂಪರ್ಕ ಹೊಂದಿರುವ ಅಂಶ ಬಯಲಾಗಿದ್ದು ವಂಚಕ ಮನ್ಸೂರ್ ಭಾರತ ಬಿಟ್ಟು ತೆರಳುವ ಕೊನೆ ಕ್ಷಣದವರೆಗೂ ಮುಜಾಹಿದ್​ನ ಸಂಪರ್ಕದಲ್ಲಿದ್ದ ಎಂಬುದು ತಿಳಿದು ಬಂದಿದೆ.

ಎಸ್ಐಟಿ ಖೆಡ್ಡಾಕ್ಕೆ ಬಿದ್ದ ಸೈಯದ್ ಮುಜಾಹಿದ್

By

Published : Jun 30, 2019, 2:21 PM IST

ಬೆಂಗಳೂರು :ಐಎಂಎ ಪ್ರಕರಣದಲ್ಲಿ ಸಾವಿರಾರು ಕೋಟಿ ವಂಚಿಸಿ ಪರಾರಿಯಾಗಿರುವ ಮನ್ಸೂರ್ ಖಾನ್ ಹಿಂದೆ ಬಿದ್ದಿರುವ ಎಸ್ಐಟಿ ಇದೀಗ ಮನ್ಸೂರ್​ ಆಪ್ತ ಸೈಯದ್ ಮುಜಾಹಿದ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಫ್ರೇಜರ್ ಟೌನ್​​ನ ಎಂ.ಎಂ ರಸ್ತೆಯಲ್ಲಿರುವ ಮುಜಾಹಿದ್ ಮನೆ ಮೇಲೆ ಸಿಸಿಬಿ ಡಿಸಿಪಿ ಗಿರೀಶ್ & ಇಬ್ಬರು ಡಿವೈಎಸ್ಪಿಗಳ ನೇತೃತ್ವದಲ್ಲಿ ದಾಳಿ ಮಾಡಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಐಎಂಎ ಹಾಗೂ ಮನ್ಸೂರ್ ಖಾನ್ ಜೊತೆ ನಿಕಟ ಸಂಪರ್ಕ ಹೊಂದಿರುವ ಅಂಶ ಬಯಲಾಗಿದ್ದು ವಂಚಕ ಮನ್ಸೂರ್ ಭಾರತ ಬಿಟ್ಟು ತೆರಳುವ ಕೊನೆ ಕ್ಷಣದವರೆಗೂ ಮುಜಾಹಿದ್​ನ ಸಂಪರ್ಕದಲ್ಲಿದ್ದ ಎಂಬುದು ತಿಳಿದು ಬಂದಿದೆ.

ಸೈಯದ್ ಮುಜಾಹಿದ್

ಯಾರು ಈ ಸೈಯದ್ ಮುಜಾಹಿದ್...?

2014ರಲ್ಲಿ ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಸೈಯದ್ ಮುಜಾಹಿದ್ ಸದ್ಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ. ಇನ್ನು ಜೆಡಿಎಸ್​​ನಿಂದ ನಾಮನಿರ್ದೇಶಿತ ಕಾರ್ಪೊರೇಟರ್ ಆಗಿರುವ ಈ ಮುಜಾಹಿದ್ ಐಎಂಎದಿಂದ ಹಣವನ್ನೂ‌ ಪಡೆದಿರುವ ಅಂಶ ಇದೀಗ ಬಯಲಾಗಿದೆ. ಜೊತೆಗೆ ವಂಚಕ ಮನ್ಸೂರ್ ಭಾರತ ಬಿಟ್ಟು ತೆರಳುವಾಗ ಏರ್ಪೋರ್ಟ್ ತನಕ ಹೋಗಿ ಬೀಳ್ಕೊಟ್ಟಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ. ಆದ್ದರಿಂದ ಎಸ್ಐಟಿ ತಂಡ ಹೆಚ್ಚಿನ ವಿಚಾರಣೆಗಾಗಿ ಮುಜಾಹಿದ್ ನನ್ನ ಬಂಧಿಸಿದ್ದಾರೆ.

ಇಂದು ಸಂಜೆ ಮುಜಾಹಿದಿನ್​ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿದ್ದು, ನಂತರ ವಿಚಾರಣೆಗಾಗಿ ಎಸ್ಐಟಿ ತನ್ನ ಕಸ್ಟಡಿಗೆ ಪಡೆಯಲಿದೆ.

ABOUT THE AUTHOR

...view details