ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ತ್ರೀವಗೊಳಿಸಿದ್ದು, ಐಎಂಎ ಜಯನಗರ ಶಾಖೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಜಯನಗರದ ಐಎಂಎ ಶಾಖೆ ಮೇಲೆ ಎಸ್ಐಟಿ ದಾಳಿ -
ಐಎಂಎಯ ಜಯನಗರದ ಶಾಖೆ ಆರಂಭವಾದಾಗಿನಿಂದ ಇದುವರೆಗೂ ಚಿನ್ನಾಭರಣ ಮಾರಾಟ ವಹಿವಾಟು ಯಾವ ರೀತಿ ನಡೆಸಲಾಗಿದೆ ಎಂಬುದರ ಬಗ್ಗೆ ಲೆಕ್ಕಪತ್ರಗಳನ್ನು ಕಲೆಹಾಕಿ ಪರಿಶೀಲನೆ ನಡೆಸಲಾಗುತ್ತಿದೆ.
![ಜಯನಗರದ ಐಎಂಎ ಶಾಖೆ ಮೇಲೆ ಎಸ್ಐಟಿ ದಾಳಿ](https://etvbharatimages.akamaized.net/etvbharat/prod-images/768-512-3589174-988-3589174-1560828988395.jpg)
ಜಯನಗರದ ಐಎಂಎ ಶಾಖೆ ಮೇಲೆ ಎಸ್ಐಟಿ ರೈಡ್
ಐಎಂಎಯ ಜಯನಗರದ ಶಾಖೆ ಆರಂಭವಾದಾಗಿನಿಂದ ಇದುವರೆಗೂ ಚಿನ್ನಾಭರಣ ಮಾರಾಟ ವಹಿವಾಟು ಯಾವ ರೀತಿ ನಡೆಸಲಾಗಿದೆ ಎಂಬುದರ ಬಗ್ಗೆ ಲೆಕ್ಕಪತ್ರಗಳನ್ನು ಕಲೆಹಾಕಿ ಪರಿಶೀಲನೆ ನಡೆಸಲಾಗುತ್ತಿದೆ.
ಈಗಾಗಲೇ ಮನ್ಸೂರ್ ಬಳಸುತ್ತಿದ್ದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿರುವ ಎಸ್ಐಟಿ, ಈವರೆಗೂ ಸುಮಾರು 450 ಕೋಟಿ ಆಸ್ತಿ ಪತ್ತೆ ಹಚ್ಚಿದೆ. ಇನ್ನೊಂದೆಡೆ ಶಿವಾಜಿನಗರದ ನಿವಾಸದ ಮನ್ಸೂರ್ ಖಾನ್ ಪತ್ನಿ ಮನೆ ಮೇಲೂ ದಾಳಿ ನಡೆಸಿದ್ದು, 2 ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.